ಕೊರೋನ ಹೋದ ಮೇಲೆ ಸಿಎಎ ಜಾರಿಗೆ ತರುತ್ತೇವೆ, ಇದು ನಮ್ಮ ಜವಾಬ್ದಾರಿ- ಅಮಿತ್ ಶಾ

0
888

ಸನ್ಮಾರ್ಗ ವಾರ್ತೆ

ಕೊಲ್ಕತಾ,ನ.7: ವಿವಾದ ಪೌರತ್ವ ತಿದ್ದುಪಡಿ ಕಾನೂನು ಕೊರೋನ ಹೋದ ಮೇಲೆ ಜಾರಿಗೆ ತರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪುನರುಚ್ಚರಿಸಿದ್ದಾರೆ. ಅದು ನಮ್ಮ ಜವಾಬ್ದಾರಿ ಎಂದು ಕೊಲ್ಕತಾದಲ್ಲಿ ಜನರನ್ನುದ್ದೇಶಿ ಮಾತಾಡುತ್ತಾ ಹೇಳಿದರು. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಿಕಟವಾಗಿದ್ದು ಈ ಹಿನ್ನೆಲೆಯಲ್ಲಿ ಅಲ್ಲಿಗೆ ಅಮಿತ್ ಶಾ ಎರಡು ದಿವಸಗಳ ಭೇಟಿ ಕೈಗೊಂಡಿದ್ದಾರೆ. ಪೌರತ್ವ ಕಾನೂನು ಜಾರಿಗೆ ತರುತ್ತೇವೆ. ಎಲ್ಲ ನಿರಾಶ್ರಿತರಿಗೂ ಪೌರತ್ವ ನೀಡುತ್ತೇವೆ. ಕೊರೋನ ಕಾಣದಿಂದ ತಡವಾಗಿದೆ.

ನೆರೆಯ ದೇಶಗಳಿಂದ ಧಾರ್ಮಿಕ ದೌರ್ಜನ್ಯಕ್ಕೊಳಗಾದವರಿಗೆ ಸಿಎಎ ಇದೆ. ಮಮತಾ, ಕಾಂಗ್ರೆಸ್, ಬಿಎಸ್‍ಪಿ ಸಿಎಎಯನ್ನು ವಿರೋಧಿಸುತ್ತದೆ. ಸಿಎಎ ಅಲ್ಪಸಂಖ್ಯಾತ ವಿರೋಧಿ ಎಂದು ಅವರು ಹೇಳುತ್ತಾರೆ. ಪ್ರತಿಪಕ್ಷ ಸುಳ್ಳು ಪ್ರಚಾರ ಮಾಡುತ್ತಿದೆ. ಎಲ್ಲರಿಗೂ ಪೌರತ್ವ ಕೊಡುವ ಕಾನೂನು ಇದು ಎಂದು ಸಿಎಎಯನ್ನು ಅಮಿತ್ ಶಾ ಬಣ್ಣಿಸಿದರು.

ರಾಜ್ಯದ ಚುನಾವಣೆಯಲ್ಲಿ ಪೌರತ್ವ ತಿದ್ದುಪಡಿ ಕಾನೂನು ಪ್ರಚಾರದ ವಿಷಯ ಮಾಡುವ ಸೂಚನೆಯನ್ನು ಅಮಿತ್ ಶಾ ನೀಡಿದ್ದಾರೆ. ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರ ವಿರುದ್ಧ ಸ್ಥಳೀಯರ ಭಾವನೆ ಕೆರಳಿಸಲು ಸಹಕಾರಿಯಾಗಬಹುದು. ಬಾಂಗ್ಲಾದೇಶದ ಗಡಿಭಾಗದಲ್ಲಿ ಮತಗಳನ್ನಾಗಿ ಪರಿವರ್ತಿಸಲು ಬಿಜೆಪಿ ಉದ್ದೇಶಿಸಿದೆ. ಈ ಹಿಂದೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಿಎಎ ಜಾರಿಗೊಳಿಸುವುದಾಗಿ ಹೇಳಿದ್ದರು.