ನೂತನ ವ್ಯಾಕ್ಸಿನ್ ನೀತಿಯ ಬಳಿಕ ವ್ಯಾಕ್ಸಿನ್ ಬೆಲೆ ಕಡಿಮೆ ಮಾಡಲು ಉತ್ಪಾದಕರೊಂದಿಗೆ ಮಾತುಕತೆಗೆ ಮುಂದಾದ ಕೇಂದ್ರ

0
161

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೊರೋನ ವ್ಯಾಕ್ಸಿನ್ ದರವನ್ನು ಬದಲಾಯಿಸಲು ಮತ್ತು ಕಡಿಮೆ ಮಾಡುವಂತೆ ಕೇಂದ್ರ ಸರಕಾರವು ವ್ಯಾಕ್ಸಿನ್ ಉತ್ಪಾದಕರೊಂದಿಗೆ
ಚರ್ಚೆ ಆರಂಭಿಸಿದೆ ಎಂದು ವರದಿಯಾಗಿದೆ.

ಇದರ ಭಾಗವಾಗಿ ವ್ಯಾಕ್ಸಿನ್ ಕೋವಿಶೀಲ್ಡ್ ತಯಾರಕರಾದ ಸೀರಂ ಇನ್ಸಿಟಿಟ್ಯೂಟ್, ಕೊವಾಕ್ಸಿನ್ ನಿರ್ಮಾಪಕರಾದ ಭಾರತ್ ಬಯೊಟೆಕ್ ನೊಂದಿಗೆ ಚರ್ಚೆಯಲ್ಲಿ ತೊಡಗಿದ್ದು ವ್ಯಾಕ್ಸಿನ್ ನೀತಿಯಲ್ಲಿ ಬದಲಾವಣೆ ತಂದ ಬೆನ್ನಿಗೆ ಕೇಂದ್ರ ಸರಕಾರ ಈ ಕ್ರಮಕ್ಕೆ ಮುಂದಾಗಿದೆ.

ಖಾಸಗಿ ಆಸ್ಪತ್ರೆಯ ವ್ಯಾಕ್ಸಿನ್ ದರ ಕೇಂದ್ರ ಸರಕಾರ ನವೀಕರಿಸಿದ್ದು ಕೋವಿ ಶೀಲ್ಡ್ 780ರೂ., ಕೊವಾಕ್ಸಿನ್‍ಗೆ 1,,410ರೂ. ಸ್ಫುಟ್ನಿಕ್‍ಗೆ 1, 145 ರೂಪಾಯಿ ದರ ನಿಗದಿಗೊಳಿಸಿತ್ತು. ವ್ಯಾಕ್ಸಿನ್ ಶೇ.5ರಷ್ಟು ಜಿಎಸ್‍ಟಿ ಇರುತ್ತದೆ. ಕೋವಿ ಶೀಲ್ಡ್ 30ರೂಪಾಯಿ, ಕೊವಾಕ್ಸಿನ್‍ಗೆ 60 ರೂಪಾಯಿ, ಸ್ಫುಟ್ನಿಕ್‍ಗೆ 47ರೂಪಾಯಿ ಜಿಎಸ್‍ಟಿ ಹಾಕಿದೆ.

ವ್ಯಾಕ್ಸಿನ್ ಕೊಡಲು ಖಾಸಗಿ ಆಸ್ಪತ್ರೆಗಳು ನೂರೈವತ್ತು ರೂಪಾಯಿ ಸರ್ವಿಸ್ ಚಾರ್ಜ್ ತೆಗೆದುಕೊಳ್ಳಬಹುದು ಎಂದು ಕೂಡ ಕೇಂದ್ರ ಸರಕಾರ ತಿಳಿಸಿತ್ತು.

ಕಳೆದ ಕೆಲ ದಿನಗಳ ಹಿಂದೆ ಮೋದಿ ಸರಕಾರ ವ್ಯಾಕ್ಸಿನ್ ನೀತಿಯಲ್ಲಿ ಬದಲಾವಣೆ ತಂದು ಹದಿನೆಂಟರಿಂದ 44 ವರ್ಷದವರಿಗೆ ವ್ಯಾಕ್ಸಿನ್ ಉಚಿತವಾಗಿ ನೀಡುವುದಾಗಿ ಅವರು ಘೋಷಿಸಿದ್ದರು. ರಾಜ್ಯಗಳಿಗಿರುವ ವ್ಯಾಕ್ಸಿನ್ ಕೇಂದ್ರ ಸರಕಾರ ವಿತರಣೆ ಮಾಡುತ್ತದೆಂದು ಹೇಳಿದ್ದರು.

LEAVE A REPLY

Please enter your comment!
Please enter your name here