ಕುಷ್ಟಗಿ: ಕೊರೋನ ನಿಯಮ ಉಲ್ಲಂಘಿಸಿ ದೇವಸ್ಥಾನಕ್ಕೆ ನುಗ್ಗಿದ 50 ಮಂದಿಯ ಬಂಧನ

0
438

ಸನ್ಮಾರ್ಗ ವಾರ್ತೆ

ಬೆಂಗಳೂರು,ಆ. 21: ಕೊರೋನ ಮಾನದಂಡಗಳನ್ನು ಪಾಲಿಸಿ ವಾರ್ಷಿಕ ಪೂಜೆ ನಡೆಯುತ್ತಿದ್ದ ದೇವಸ್ಥಾನವೊಂದಕ್ಕೆ ನುಗ್ಗಿ ಗಲಾಟೆ ಮಾಡಿದ 50 ಮಂದಿಯನ್ನು ಬಂಧಿಸಲಾಗಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗು ತಾಲೂಕಿನ ದೊಟ್ಟಿಹಾಳ ಗ್ರಾಮದಲ್ಲಿ ಘಟನೆ ನಡೆದಿದೆ.

ತಹಸೀಲ್ದಾರರ ಅನುಮತಿ ಪಡೆದು ತುಂಬ ಕಡಿಮೆ ಮಂದಿ ಸೇರಿ ದೇವಳದಲ್ಲಿ ವಾರ್ಷಿಕ ಅಡ್ಡ ಪಲ್ಲಕ್ಕಿ ಉತ್ಸವ ನಡೆಸುವ ವೇಳೆ ಬಂದ ಜನರು ಗೇಟನ್ನು ದೂಡಿ ಹಾಕಿ ಪ್ರದಕ್ಷಿಣೆಗಾಗಿ ಪಲ್ಲಕ್ಕಿಯನ್ನು ಹೊರಗೆ ತಂದಿದ್ದಾರೆ.

ದೇವಳದಲ್ಲಿ ಐವತ್ತಕ್ಕೂ ಕಡಿಮೆ ಜನರಿದ್ದರು. ಮಾತ್ರವಲ್ಲ ಹೆಚ್ಚು ಮಂದಿ ಬರಬಾರದೆಂದು ದೇವಳದ ಬಾಗಿಲನ್ನು ಮುಚ್ಚಲಾಗಿತ್ತು. ಇದರಿಂದ ಹೊರಗಿದ್ದವರು ಕೋಪಗೊಂಡರು. ಬಾಗಿಲು ಒಡೆದು ಒಳಗೆ ನುಗ್ಗಿ ಪಲ್ಲಕ್ಕಿಯನ್ನು ಹೊರಗೆ ಎಳೆದು ತಂದಿದ್ದಾರೆ.

ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದ ಪೊಲೀಸರು ಜನರನ್ನು ಚದುರಿಸಿದರು. ಕೊರೋನ ಮಾನದಂಡಗಳನ್ನು ಉಲ್ಲಂಘಿಸಿದ್ದು ಮತ್ತು ದೇವಳದ ಬಾಗಿಲು ಮುರಿದು ಗಲಾಟೆ ಮಾಡಿದ್ದಕ್ಕಾಗಿ 50 ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಪೊಲೀಸ್ ಸೂಪರಿಡೆಂಟ್ ಜಿ.ಸಂಗೀತ ತಿಳಿಸಿದ್ದಾರೆ.

ಘಟನೆಯ ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಬಂಧನ ನಡೆದಿದೆ. ಇನ್ನಷ್ಟು ಮಂದಿಯ ಬಂಧನ ನಡೆಯಲಿದೆ ಎಂದು ಎಸ್ಪಿ ತಿಳಿಸಿದರು.

ಓದುಗರೇ ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.