ಮೇಲ್ಜಾತಿಯವರ ಮನೆಯಿಂದ ಹೂ ಕಿತ್ತ ಬಾಲಕಿ; 40 ದಲಿತ ಕುಟುಂಬಗಳಿಗೆ ಬಹಿಷ್ಕಾರ

0
539

ಸನ್ಮಾರ್ಗ ವಾರ್ತೆ

ಭುವನೇಶ್ವರ,ಆ.21: ಮೇಲ್ಜಾತಿಯವರ ಮನೆಯಿಂದ 15 ವರ್ಷ ಬಾಲಕಿ ಹೂ ಕಿತ್ತದ್ದಕ್ಕಾಗಿ 40 ದಲಿತ ಕುಟುಂಬಗಳಿಗೆ ಊರಿನಿಂದ ಬಹಿಷ್ಕಾರ ಹಾಕಿದ ಘಟನೆ ಒಡಿಸ್ಸಾದ ದೆಂಗನಾಲ್ ಜಿಲ್ಲೆಯ ಕಾಮತಿಯೊ ಕಟ್ಟೊನಿ ಗ್ರಾಮದಲ್ಲಿ ನಡೆದಿದೆ.

ಎರಡು ತಿಂಗಳ ಹಿಂದೆ ಗ್ರಾಮದ ಮೇಲ್ಜಾತಿಯ ವ್ಯಕ್ತಿಯ ಮನೆಯಿಂದ ಬಾಲಕಿ ಹೂ ಕಿತ್ತಿದ್ದಳು. ಘಟನೆ ಗ್ರಾಮದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆಯೆಡೆಗೆ ಸಾಗಿತ್ತು. ಈಗ ಬಾಲಕಿಯ ಸಮುದಾಯದ 40 ದಲಿತ ಕುಟುಂಬಗಳಿಗೆ ಊರಿನ ಬಹಿಷ್ಕಾರ ಹಾಕಲಾಗಿದೆ

ಇದೇ ವೇಳೆ, ಬಾಲಕಿ ಹೂ ಕಿತ್ತದ್ದು ಗೊತ್ತಾದ ಕೂಡಲೇ ಬಾಲಕಿ ಮನೆಯವರು ಮೇಲ್ಜಾತಿ ಕುಟುಂಬದ ಕ್ಷಮೆ ಯಾಚಿಸಿದ್ದರು. ಆದರೆ ಸಮುದಾಯದವರು ಒಟ್ಟು ಸೇರಿ ಹಲವು ಬಾರಿ ಸಭೆ ನಡೆಸಿದ್ದಾರೆ. ನಂತರ ಬಹಿಷ್ಕಾರ ಹಾಕಲಾಯಿತೆಂದು ಬಾಲಕಿಯ ತಂದೆ ನಿರಂಜನ್ ನಾಯಿಕ್ ಹೇಳಿದ್ದಾರೆ.

ಊರಿಗೆ ಬಹಿಷ್ಕಾರ ಹಾಕಿದ್ದರಿಂದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ, ಸಾರ್ವಜನಿಕ ದಾರಿಯಲ್ಲಿ ನಡೆದಾಡಲು ಇವರಿಗೆ ಅನುಮತಿ ನಿರಾಕರಿಸಲಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.