ಸನ್ಮಾರ್ಗ ವಾರ್ತೆ
ಚೆನ್ನೈ,ಡಿ.5:ತಮಿಳ್ನಾಡಿನ ಬಿಜೆಪಿ ಉಪಾಧ್ಯಕ್ಷ ಬಿಟಿ ಅರಸಕುಮಾರ್ ಡಿಎಂಕೆ ಪಾರ್ಟಿಗೆ ಸೇರ್ಪಡೆಯಾಗಿದ್ದಾರೆ. ಗುರುವಾರ ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಉಪಸ್ಥಿತಿಯಲ್ಲಿ ಪಾರ್ಟಿಗೆ ಅರಸಕುಮಾರ್ ಸೇರ್ಪಡೆಯಾದರು. ಕಳೆದ ರವಿವಾರ ಪುದುಕೋಟೆಯಲ್ಲಿ ನಡೆದ ಒಂದು ಮದುವೆ ಸತ್ಕಾರ ಕೂಟದಲ್ಲಿ ಅರಸಕುಮಾರ್ ಡಿಎಂಕೆ ಅಧ್ಯಕ್ಷ ಸ್ಟಾಲಿನ್ರನ್ನು ಹೊಗಳಿ ಮಾತಾಡಿದ್ದರು. ಸ್ಟಾಲಿನ್ರನ್ನು ಎಂಜಿಆರ್ಗೆ ಹೋಲಿಸಿದ್ದರು. ತಮಿಳ್ನಾಡಿನ ಮುಂದಿನ ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತಿದ್ದೇನೆ ಎಂದು ಹೇಳಿದ್ದರು.
ಅರಸಕುಮಾರ್ರ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಪಾರ್ಟಿ ಸದಸ್ಯರು ಅವರ ವಿರುದ್ಧ ರಂಗಪ್ರವೇಶಿಸಿದ್ದರು. ನಂತರ ಬಿಜೆಪಿ ಅವರಿಂದ ಸ್ಪಷ್ಟೀಕರಣ ಕೇಳಿತ್ತು. ಬಿಜೆಪಿಯಲ್ಲಿ ತನ್ನ ಆತ್ಮಾಭಿಮಾನಕ್ಕೆ ಹೊಡೆತ ಬಿದ್ದಿದೆ. ಬಿಜೆಪಿಯಲ್ಲಿ ಶಿಸ್ತು ಇಲ್ಲದ ಜನರು ಇದ್ದಾರೆ. ಅವರು ಅಶ್ಲೀಲ ಪದಗಳನ್ನು ಉಪಯೋಗಿಸುತ್ತಾರೆ ಎಂದು ಅರಸುಕುಮಾರ್ ಹೇಳಿದರು.
ಡಿಎಂಕೆ ತನ್ನ ಮಾತೃ ಸಂಘಟನೆಯಾಗಿದೆ. ಅದಕ್ಕಾಗಿ ತಾನು ಮರಳಿ ಅಲ್ಲಿಗೆ ಬಂದಿರುವೆ. ಎಂಕೆ ಸ್ಟಾಲಿನ್ರೊಂದಿಗೆ ಕಳೆದ 20 ವರ್ಷಗಳಿಂದ ಸೌಹಾರ್ದ ಸಂಬಂಧ ಹೊಂದಿದ್ದೇನೆ. ಅವರು ಉತ್ತಮ ನಾಯಕ. ಸ್ಟಾಲಿನ್ ತನಗೆ ಒಂದು ಅವಕಾಶ ಕೊಟ್ಟರೆ ಸ್ವೀಕರಿಸುವೆ ಎಂದು ಅರಸಕುಮಾರ್ ಹೇಳಿದರು.












