ಚಿದಂಬರಂ ಜಾಮೀನು ಅರ್ಜಿ ವಿಚಾರಣೆ ಇನ್ನು ಸುಪ್ರೀಂಕೋರ್ಟಿನಲ್ಲಿ

0
509

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.3:ಐಎನ್‍ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಚಿದಂಬರಂ ಸುಪ್ರೀಂಕೋರ್ಟಿನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ದಿಲ್ಲಿ ಹೈಕೋರ್ಟು ಜಾಮೀನು ನಿರಾಕರಿಸಿದ ಬೆನ್ನಿಗೆ ಚಿದಂಬರಂ ಸುಪ್ರೀಂಕೋರ್ಟಿನ ಮೊರೆ ಹೋದರು. ಹಿರಿಯ ವಕೀಲ ಕಪಿಲ್ ಸಿಬಲ್ ಚಿದಂಬರಂಗಾಗಿ ಹಾಜರಾಗಿದ್ದಾರೆ.

ಅರ್ಜಿ ತ್ವರಿತ ವಿಚಾರಣೆಗೆ ಪರಿಗಣಿಸಬೇಕೆಂದು ಜಸ್ಟಿಸ್ ಎನ್‍ವಿ ರಮಣರ ಅಧ್ಯಕ್ಷತೆಯ ಸುಪ್ರೀಂಕೋರ್ಟಿನ ಪೀಠದ ಮುಂದೆ ಕಪಿಲ್ ಸಿಬಲ್ ಮನವಿ ಮಾಡಿಕೊಂಡರು. ಸಂಜೀವ್ ಖನ್ನ, ಕೃಷ್ಣ ಮುರಾರಿ ಪೀಠದ ಇತರ ಸದಸ್ಯರು. ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ಅರ್ಜಿ ಲೀಸ್ಟ್ ಮಾಡುವ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

ಈ ಹಿಂದೆ ಚಿದಂಬರಂಗೆ ಜಾಮೀನು ನೀಡುವುದನ್ನು ಸಿಬಿಐ ವಿರೋಧಿಸಿತ್ತು. ಇದೇ ವೇಳೆ ಏಳು ವರ್ಷ ಶಿಕ್ಷೆ ಲಭಿಸಬಹುದಾದ ಆರೋಪಗಳನ್ನು ಚಿದಂಬರ ವಿರುದ್ಧ ಹೊರಿಸಲಾಗಿದೆ. ಆದ್ದರಿಂದ ಅವರಿಗೆ ಜಾಮೀನು ಪಡೆಯುವ ಅರ್ಹತೆ ಇದೆ ಎಂದು ಕಪಿಲ್ ಸಿಬಲ್ ವಾದಿಸಿದ್ದಾರೆ.