ಜಮ್ಮು-ಕಾಶ್ಮೀರಕ್ಕೆ ಪೂರ್ಣ ರಾಜ್ಯದ ಸ್ಥಾನ ನೀಡಲು ಪಿ.ಚಿದಂಬರಂ ಆಗ್ರಹ

0
618

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಜಮ್ಮು ಕಾಶ್ಮೀರಕ್ಕೆ ಪೂರ್ಣ ರಾಜ್ಯದ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿದ್ದಾರೆ. ಮುಂದಿನ ಮಳೆಗಾಳದ ಅಧಿವೇಶನದಲ್ಲಿ ಅಪಾಯಕಾರಿ ಕಾನೂನನ್ನು ರದ್ದುಗೊಳಿಸಿ ಆ ನಾಡು ಪೂರ್ವ ಸ್ಥಿತಿಗೆ ಮರಳುವಂತೆ ಮಾಡಬೇಕೆಂದು ಅವರು ಹೇಳಿದರು.

ಪ್ರಧಾನಿ ಮೋದಿ ಜೂನ್ 24ಕ್ಕೆ ಜಮ್ಮು ಕಾಶ್ಮೀರದ ರಾಜಕೀಯ ಪಾರ್ಟಿಗಳ ಸಭೆಯನ್ನು ಕರೆದಿದ್ದು ಅದಕ್ಕಿಂತ ಮೊದಲು ಚಿದಂಬರ್ ಪೂರ್ಣ ರಾಜ್ಯದ ಧ್ವನಿಯೆತ್ತಿದ್ದಾರೆ. ಜಮ್ಮು ಕಾಶ್ಮೀರಕ್ಕೆ ಪೂರ್ಣ ರಾಜ್ಯದ ಸ್ಥಾನಮಾನ ನೀಡಬೇಕೆಂದು ಕಾಂಗ್ರೆಸ್ ಪಾರ್ಟಿಯ ನಿಲುವು ಆಗಿದೆ. ಅದನ್ನೇ ಪುನರುಚ್ಚರಿಸುತ್ತಿರುವುದಾಗಿ ಚಿದಂಬರಂ ಹೇಳಿದರು.

ಜಮ್ಮು-ಕಾಶ್ಮೀರವನ್ನು ಒಂದು ರಾಜ್ಯವಾಗಿ ಸಂವಿಧಾನದ ಮೂಲಕ ಮಾಡಲಾಗಿತ್ತು. ಅದನ್ನು ಸಂಸತ್ತಿನ ಯಾವುದೇ ಅಧಿಸೂಚನೆಯ ಮೂಲಕ ಬದಲಿಸಲಾಗದು ಎಂದು ಚಿದಂಬರಂ ನೆನಪಿಸಿದರು. ಜಮ್ಮು ಕಾಶ್ಮೀರ ವಿಭಜನೆ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಈ ಪ್ರಕರಣ ಎರಡು ವರ್ಷದಿಂದ ಕೊಳೆಯುತ್ತಿದೆ. ಮಾನ್ಸೂನ್ ಅಧಿವೇಶನದಲ್ಲಿ ಈ ಕಾನೂನನ್ನು ರದ್ದುಪಡಿಸಿ ಜಮ್ಮು ಕಾಶ್ಮೀರದಲ್ಲಿ ಪೂರ್ವ ಸ್ಥಿತಿಯನ್ನು ಮರುಸ್ಥಾಪಿಸಬೇಕೆಂದು ಅವರು ಹೇಳಿದರು.

ಜಮ್ಮು ಕಾಶ್ಮೀರದ ಒಂದು ರಾಜ್ಯವಾಗಿದ್ದು ವಿಲೀನದ ದಾಖಲೆಗಳಿಗೆ ಸಹಿ ಹಾಕಿ ಅದನ್ನು ಭಾರತದೊಂದಿಗೆ ಸೇರಿಸಲಾಗಿತ್ತು. ಆದುದರಿಂದ ಆ ಸ್ಥಿತಿಯು ಅಲ್ಲಿ ಯಾವಾಗಲೂ ಇರಬೇಕಾಗಿದೆ. ಜಮ್ಮು ಕಾಶ್ಮೀರ ರಿಯಲ್ ಎಸ್ಟೇಟ್‍ನ ಭಾಗ ಅಲ್ಲ. ಅಲ್ಲಿನ ಜನರ ನಾಡು ಅದು. ಅವರ ಹಕ್ಕು ಭಾವನೆಗಳನ್ನು ಗೌರವಿಸಬೇಕೆಂದು ಚಿದಂಬರಂ ಹೇಳಿದರು.