ಐಎನ್‌‌ಎಕ್ಸ್ ಮೀಡಿಯಾ ಪ್ರಕರಣ: ಯಾಕೆ ಯಾವ ಅಧಿಕಾರಿಗಳನ್ನೂ ಬಂಧಿಸಲಾಗಿಲ್ಲ- ಚಿದಂಬರಂ ಟ್ವೀಟ್!

0
700

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.9: ತನ್ನ ಬಂಧನದ ಕುರಿತು ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ, ಈ ಪ್ರಕರಣದಲ್ಲಿ ಯಾಕೆ ಅಧಿಕಾರಿಗಳ ಬಂಧನವಾಗಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಕೂಡ ನಾನು ಮಾಡಿದ್ದಲ್ಲ. ಹೀಗೆ ಟ್ವೀಟ್ ಮಾಡಬೇಕೆಂದು ಕುಟುಂಬದವರಲ್ಲಿ ಕೇಳಿಕೊಂಡೆ. ಅವರು ನನಗಾಗಿ ಟ್ವೀಟ್ ಮಾಡಿದ್ದಾರೆ ಎಂದು ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿ ಡಝನ್‍ಗಟ್ಟಲೆ ಅಧಿಕಾರಿಗಳಿದ್ದಾರೆ ಆದರೆ ಯಾರನ್ನೂ ಬಂಧಿಸಲಾಗಿಲ್ಲ. ಯಾಕೆ ನಿಮ್ಮನ್ನು ಮಾತ್ರ ಬಂಧಿಸಲಾಗಿದೆ ಎಂದು ಜನರು ಕೇಳುತ್ತಿದ್ದಾರೆ. ನನ್ನಲ್ಲಿ ಇದಕ್ಕೆ ಉತ್ತರವಿಲ್ಲ. ಹೀಗೆ ಚಿದಂಬರಂ ತನ್ನ ಟ್ವಿಟರ್ ಅಕೌಂಟಿನಲ್ಲಿ ಪೋಸ್ಟ್ ಹಾಕಿದ್ದಾರೆ.

ಆದರೆ ಯಾವ ಅಧಿಕಾರಿಯೂ ತಪ್ಪೆಸಗಿಲ್ಲ, ಯಾರೂ ಬಂಧನಕ್ಕೊಳಗಾಗಬೇಕೆಂದು ತಾನು ಬಯಸುವುದಿಲ್ಲ ಎಂದು ಎರಡನೇ ಟ್ವೀಟ್‍ನಲ್ಲಿ ಅವರು ತಿಳಿಸಿದ್ದಾರೆ. ಗುರುವಾರ ಸಂಜೆ ಚಿದಂಬರಂರನ್ನು ತಿಹಾರ್ ಜೈಲಿನ ಏಳನೇ ನಂಬರಿನ ಸೆಲ್‌ನಲ್ಲಿರಿಸಲಾಗಿದೆ. ಇದೇ ಸೆಲ್‍ನಲ್ಲಿ ಕಳೆದ ವರ್ಷ ಚಿದಂಬರಂ ಪುತ್ರ ಕಾರ್ತಿ ಕೂಡ ಇದ್ದರು.