ರಾಜ್ಯ ಸರಕಾರದ ಸಂವಿಧಾನಕ್ಕೆ ಬದ್ಧ ವಾಗಿದೆಯೇ ಹೊರತು ಆರೆಸ್ಸೆಸ್ ಅಜೇಂಡಾಕ್ಕೆ ಅಲ್ಲ- ಪಿಣರಾಯಿ ವಿಜಯನ್

0
1464

ಸನ್ಮಾರ್ಗ ವಾರ್ತೆ-

ತಿರುವನಂತಪುರಂ, ಡಿ. 16: ಕೇಂದ್ರ ತಂದಿರುವ ಪೌರತ್ವ ತಿದ್ದುಪಡಿ ಕಾನೂನು ಕುರಿತು ರಾಜ್ಯ ಸರಕಾರಕ್ಕೆ ತೀರ್ಮಾನ ಕೈಗೊಳ್ಳಲು ಅವಕಾಶ ಇದೆಯೇ ಎಂಬ ವಿಷಯದಲ್ಲಿ ಸಂಶಯ ಇದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಅವರು ತಿರುವನಂತಪುರಂನಲ್ಲಿ ಆಡಳಿತ- ಪ್ರತಿಪಕ್ಷಗಳು ಜಂಟಿಯಾಗಿ ಆಯೋಜಿಸಿದ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ರಾಜ್ಯ ಸರಕಾರಕ್ಕೆ ಇಂತಹ ತೀರ್ಮಾನ ಸಾಧ್ಯವೆ ಎಂದು ಕೆಲವರಲ್ಲಿ ಆತಂಕ ಇದೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ರೂಪುಗೊಳ್ಳುವುದು ಮತ್ತು ಉಳಿಯುವುದರ ಬಗ್ಗೆ ಪೌರತ್ವ ಕಾನೂನುಗಳು ಉಂಟಾಗಿದ್ದು ಭಾರತದ ಸಂವಿಧಾನದಡಿಯಲ್ಲಿ. ಸಂವಿಧಾನದ ಆಧಾರಿತ ನಿಲುವುಗಳಲ್ಲಿ ಮಾತ್ರ ಸರಕಾರಕ್ಕೆ ಬದ್ಧತೆ ಇದೆ ಎಂದು ಅವರು ಹೇಳಿದರು.

ಅದರ ಆಧಾರದಲ್ಲಿಯೇ ಸಚಿವ ಸಂಪುಟ ಪ್ರಮಾಣವಚನ ಸ್ವೀಕರಿಸಿದ್ದು. ಅದನ್ನು ಬುಡಮೇಲುಗೊಳಿಸಲು ಯಾರೇ ಮುಂದಾದರೂ ಸಂವಿಧಾನದ ಮೌಲ್ಯಗಳನ್ನುಎತ್ತಿ ಹಿಡಿದು ಹೋರಾಡುವುದು ಪ್ರಮಾಣವಚನದ ಉಲ್ಲಂಘನೆಯಲ್ಲ. ಅದರೊಂದಿಗಿರುವ ಬದ್ಧತೆಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯ ಸರಕಾರಕ್ಕೆ ಬದ್ಧತೆ ಸಂವಿಧಾನದಲ್ಲಿದೆ. ಅಲ್ಲದೆ,ಆರೆಸ್ಸೆಸ್ ಸೃಷ್ಟಿಸುವ ಅಜೆಂಡಾಗಳಲ್ಲಲ್ಲ. ಪೌರತ್ವ ತಿದ್ದುಪಡಿ ಜಾರಿಗೊಳಿಸಬೇಕೆಂದು ಯಾರು ಹೇಳಿದರೂ ಕೇರಳದಲ್ಲಿ ಅದು ಜಾರಿಗೆ ಬರುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.