ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಡಿ. 16: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ನಡೆದ ಪ್ರತಿಭಟನೆ ಎದುರಿಸುವ ವೇಳೆ ಜಾಮಿಅ ಮಿಲ್ಲಿಯ ಇಸ್ಲಾಮಿಯ ಕ್ಯಾಂಪಸ್ನೊಳಗೆ ಹೋಗಿದ್ದು ಕಲ್ಲೆಸೆದವರನ್ನು ಹಿಡಿಯಲು ಎಂದು ದಿಲ್ಲಿ ಪೊಲೀಸರಿಂದ ವಿವರಣೆ ಬಂದಿದೆ. ವಿದ್ಯಾರ್ಥಿಗಳ ನಡುವೆ ನುಸುಳಿ ಪೊಲೀಸರನ್ನು ಆಕ್ರಮಿಸಿದವರನ್ನು ಗುರುತಿಸಿದ್ದೇವೆ. ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಜರಗಿಸಲಾಗುವುದು. ವಿದ್ಯಾರ್ಥಿಗಳು ಹೆದರಬೇಕಾಗಿಲ್ಲ ಎಂದು ದಿಲ್ಲಿ ಪೊಲೀಸ್ ಪಿ ಆರ್ ರಾಂಧ್ವಾ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿದ್ಯಾರ್ಥಿಗಳ ಪ್ರತಿಭಟನೆ ಎದುರಿಸುವಲ್ಲಿ ಪೊಲೀಸರು ಗರಿಷ್ಠ ಸಂಯಮ ತೋರಿಸಿದರು. ರವಿವಾರ ಮಧ್ಯಾಹ್ನ ಎರಡು ಗಂಟೆಗೆ ಪ್ರತಿಭಟನೆ ಆರಂಭವಾಯಿತು. ವಿದ್ಯಾರ್ಥಿಗಳಲ್ಲದ ಪ್ರದೇಶ ವಾಸಿಗಳು ಅವರ ಜೊತೆಗಿದ್ದರು. ಹೆಚ್ಚು ಉದ್ವಿಗ್ನವಾದ ಪರಿಸ್ಥಿತಿಯಲ್ಲಿ ಪೊಲೀಸರು ಸಾಕಷ್ಟು ಸಂಯಮ ವಹಿಸಿದ್ದಾರೆ. 4:30ಕ್ಕೆ ಸಂಜೆ ಕೆಲವರು ಮಾತಾ ಮಂದಿರ ಮಾರ್ಗದಲ್ಲಿ ಕೆಲವರು ಬಸ್ಗೆ ಬೆಂಕಿ ಹಾಕಿದರು ಎಂಬ ಆರೋಪವನ್ನು ರಾಂಧ್ವಾ ನಿರಾಕರಿಸಿದರು. ಪೊಲೀಸರು ಬಸ್ಗೆ ಬೆಂಕಿ ಹಾಕಿಲ್ಲ. ಬೆಂಕಿ ಆರಿಸಲು ಯತ್ನಿಸಿದ್ದು ಎಂದು ಅವರು ತಿಳಿಸಿದರು. ಜಾಮಿಅದ ಘರ್ಷಣೆ ಸಂಬಂಧಿಸಿ ಹಲವಾರು ವದಂತಿ ಹರಡುತ್ತಿವೆ. ಅದನ್ನು ನಂಬಬೇಡಿ. ಎಲ್ಲರೊಂದಿಗೆ ಹಾಗೂ ವಿದ್ಯಾರ್ಥಿಗಳೊಂದಿಗೆ ಪೊಲೀಸರ ವಿನಂತಿಯಾಗಿದೆ ಎಂದು ಅವರು ಹೇಳಿದರು.












