ಕೇರಳ: ನಾಳೆಯ ಪ್ರತಿಭಟನೆ ಕಾನೂನು ವಿರುದ್ಧ ; ನಾಶನಷ್ಟವನ್ನು ನಾಯಕರಿಂದ ವಸೂಲು ಮಾಡಲಾಗುವುದು- ಡಿಜಿಪಿ

0
985

ಸನ್ಮಾರ್ಗ ವಾರ್ತೆ-

ತಿರುವನಂತಪುರಂ, ಡಿ. 16: ಮಂಗಳವಾರ ನಡೆಯುವ ಹರತಾಳವನ್ನು ಹಿಂಪಡೆಯಬೇಕೆಂದು ಡಿಜಿಪಿ ಲೋಕನಾರ್ಥ ಬೆಹ್ರಾ ಹೇಳಿದ್ದಾರೆ. ಹರತಾಳ ನಡೆಸಲು ಏಳು ದಿವಸ ಮೊದಲು ನೋಟಿಸು ನೀಡಬೇಕೆಂದು ಕಾನೂನು ಇದೆ. ಅದರೆ ಹರತಾಳ ಘೋಷಿಸಿದ ಸಂಘಟನೆಗಳು ಇದನ್ನು ಪಾಲಿಸಿಲ್ಲ. ಆದ್ದರಿಂದ ನಾಳೆಯ ಹರತಾಳ ಕಾನೂನು ಬಾಹಿರವಾಗಿದೆ. ನೋಟಿಸು ಕಡೆಗಣಿಸಿದರೆ ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂದು ಡಿಜಿಪಿ ಹೇಳಿದ್ದಾರೆ.

ಹರತಾಳಕ್ಕೆ ಸಂಬಂಧಿಸಿ ಸಂಘಟನೆಗಳ ಪ್ರತಿಭಟನಾ ರಾಲಿಗೆ ಯಾವುದೆ ಅಡ್ಡಿಯಿಲ್ಲ. ಆದರೆ ಹರತಾಳಕ್ಕೆ ಅನುಮತಿಯಿಲ್ಲ. ಹರತಾಳ ಆಗಿ ಉಂಟಾಗುವ ನಾಶನಷ್ಟಗಳು ಅದಕ್ಕೆ ಸಂಬಂಧಿಸಿದ ಸಂಘಟನೆಯ ನಾಯಕರಿಂದ ವಸೂಲು ಮಾಡಲಾಗುವುದು. ಮುನ್ನೆಚ್ಚರಿಕಾ ಬಂಧನಗಳು ನಡೆಯಬಹುದು ಎಂದು ಬೆಹ್ರಾ ಹೇಳಿದರು.