ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಚರ್ಚ್ ಮೇಲೆ ತೀವ್ರ ಹಿಂದುತ್ವವಾದಿ ಸಂಘಟನೆಯ ಕಾರ್ಯಕರ್ತರು ದಾಳಿ ಮಾಡಿದ್ದು ಏಸುವಿನ ಫೋಟೊ ಬೈಬಲ್ ನಾಶ ಮಾಡಿದ್ದಾರೆ. ಚರ್ಚ್ ನಲ್ಲಿದ್ದವರಿಗೆ ಹಲ್ಲೆ ನಡೆಸಿದ್ದಾರೆ. ಘೋಷಣೆ ಕೂಗುತ್ತಾ ಬಂದ ದುಷ್ಕರ್ಮಿಗಳ ತಂಡದ ಕೃತ್ಯದ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ದಿಲ್ಲಿಯ ತಾಹಿರ್ ಪುರಿಯ ಸಿಯ್ಯೊನ್ನಲ್ಲಿ ಘಟನೆ ನಡೆದಿದೆ.
ನಾವು ಹಿಂದೂ ರಾಷ್ಟ್ರ ಸ್ಥಾಪಿಸುವೆವು. ಜೈ ಶ್ರೀರಾಂ ಎಂದು ಸ್ಪೀಕರಿನಲ್ಲಿ ಕೂಗಿದ ದುಷ್ಕರ್ಮಿಗಳು ಪ್ರಾರ್ಥನೆ ನಿಲ್ಲಿಸಲು ಹೇಳಿದರು. ದೇಶ ಈಗ ಜಾತ್ಯತೀತವಲ್ಲ ಕಾನೂನು ಬದಲಾಗಿದೆ ಎಂದು ಹೇಳಿರುವುದಾಗಿ ಹಲ್ಲೆಗೊಳಗಾದವರು ತಿಳಿಸಿದ್ದಾರೆ. ಇದೇ ವೇಳೇ ಚರ್ಚಿನಲ್ಲಿ ಮತಾಂತರ ಯತ್ನ ನಡೆಯುತ್ತಿದೆ. ಇದಕ್ಕೆ ಅವಕಾಶ ನೀಡುವುದಿಲ್ಲವೆಂದು ದುಷ್ಕರ್ಮಿಗಳು ಹೇಳುತ್ತಿದ್ದಾರೆ.
ಸಂಜೆ ಚರ್ಚ್ ಅಧಿಕಾರಿಗಳು ಜಿಟಿಬಿ ಎನ್ಕ್ಲೇವ್ ಪೊಲೀಸು ಠಾಣೆಗೆ ದೂರು ನೀಡಿದ್ದಾರೆ. ಅಲ್ಲಿ ನೂರರಷ್ಟು ಬಜರಂಗದಳ , ವಿಹಿಂಪ .ಆರೆಸ್ಸೆಸ್ ಕಾರ್ಯಕರ್ತರಿದ್ದರು. ಜೈಶ್ರೀಂ ಘೋಷಣೆ ಕೂಗುತ್ತಿದ್ದರು. ಕೆಲವರು ಪೊಲೀಸ್ ಠಾಣೆಗೆ ಹತ್ತಿ ಜೈಶ್ರೀರಾಂ ಕೂಗಿದರು. ಇವರೆಲ್ಲ ವಿಹಿಂಪ ಮತ್ತು ಬಜರಂಗಿಗಳು ಎಂದು ಚರ್ಚ್ನ ಅಧಿಕಾರಿಗಳು ಹೇಳಿದ್ದಾರೆ.
ಘಟನೆಯಲ್ಲಿ ಒಬ್ಬ ಗಾಯಗೊಂಡಿದ್ದು ಒಬ್ಬನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಸುರಕ್ಷಾ ಕ್ಯಾಮರಗಳನ್ನು ಪರಿಶೀಲಿಸುತ್ತಿದ್ದಾರೆ. ಎರಡು ವಿಭಾಗದವರ ದೂರಿನಲ್ಲಿ ಕೇಸು ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದರು.












