ಪೌರತ್ವ ತಿದ್ದುಪಡಿ ಕಾನೂನು: ಕೇರಳ ವಿಧಾನಸಭೆಯ ವಿಶೇಷ ಅಧಿವೇಶನ

0
489

ಸನ್ಮಾರ್ಗ ವಾರ್ತೆ
ತಿರುವನಂತಪುರಂ, ಡಿ. 31: ಪೌರತ್ವ ತಿದ್ದುಪಡಿ ಕಾನೂನು ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲು ವಿಧಾನಸಭೆಯ ವಿಶೇಷ ಅಧಿವೇಶನ ಆರಂಭವಾಗಿದೆ. ಕಾನೂನು ಹಿಂದೆಗೆಯಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಸ್ತಾವ ಮಂಡಿಸಿದರು. ಸಿ ಎ ಎ ಸಂವಿಧಾನ ವಿರೋಧಿ ಕಾನೂನು ಎಂದು ಮುಖ್ಯಮಂತ್ರಿ ಹೇಳಿದರು. ಇದೇವೇಳೆ ಪೌರತ್ವ ತಿದ್ದುಪಡಿ ಕಾನೂನಿನ ಕುರಿತು ಪ್ರಕಟಣೆ ಹೊರಡಿಸಬಾರದೆಂದು ಕೇಂದ್ರ ಸರಕಾರವನ್ನು ಆಗ್ರಹಿಸಬೇಕೆನ್ನುವ ಪ್ರತಿಪಕ್ಷದ ಬೇಡಿಕೆಯನ್ನು ರಾಜ್ಯ ಸರಕಾರ ಒಪ್ಪಿಕೊಂಡಿಲ್ಲ. ಪ್ರಸ್ತಾವವನ್ನು ಬಿಜೆಪಿಯ ಒಬ್ಬನೇ ಒಬ್ಬ ಶಾಸಕ ಒ. ರಾಜಗೋಪಾಲ್ ವಿರೋಧಿಸಿದರು.

ಪರಿಶಿಷ್ಟ ವಿಭಾಗಕ್ಕೆ ಮೀಸಲಾತಿಯನ್ನು ಹತ್ತು ವರ್ಷಗಳವರೆಗೆ ಮುಂದುವರಿಸುವ ಸಂವಿಧಾನ ತಿದ್ದುಪಡಿ ಪ್ರಸ್ತಾವವನ್ನು ಕೂಡ ಪಿಣರಾಯಿ ವಿಜಯನ್ ಮಂಡಿಸಿದರು. ಶಿಥಿಲ ಜೀವನ ವ್ಯವಸ್ಥೆ ಹಲವು ಸ್ತರದಲ್ಲಿದೆ ಎಂದು ಮುಖ್ಯಮಂತ್ರಿ ಹೇಳಿದರು. ಪೌರತ್ವ ತಿದ್ದುಪಡಿ ಕಾನೂನಿನ ಬಗ್ಗೆ ಪ್ರಕಟಣೆ ಹೊರಡಿಸಬಾರೆಂದು ಸೂಚಿಸಿ ಪ್ರಸ್ತಾವ ಪಾಸು ಮಾಡಲು ಪ್ರತಿಪಕ್ಷ ನಾಯಕ ಪತ್ರ ನೀಡಿದರು. ಬಿಜೆಪಿ ಮಾತ್ರ ಪ್ರಸ್ತಾವವನ್ನು ವಿರೋಧಿಸುವ ಸಾಧ್ಯತೆಯಿದೆ. ರವಿವಾರ ಸರ್ವಪಕ್ಷ ಸಭೆಯಲ್ಲಿ ವಿಧಾನಸಭೆ ಅಧಿವೇಶನಕ್ಕೆ ನಿರ್ದೇಶ ನೀಡಲಾಗಿತ್ತು. ತುರ್ತು ಸಚಿವ ಸಂಪುಟ ಸಭೆಗೆ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿತ್ತು.