ಕಾನೂನು ಪರೀಕ್ಷೆ ಮುಂದೂಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

0
380

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕಾನೂನು ಅಧ್ಯಯನದ ಸಾರ್ವತ್ರಿಕ ಕಾನೂನು ಪ್ರವೇಶ ಪರೀಕ್ಷೆ( ಕ್ಲಾಟ್ 2021) ಅನ್ನು ಮುಂದೂಡಲು ಸುಪ್ರೀಂ ಕೋರ್ಟು ನಿರಾಕರಿಸಿದೆ. ಜುಲೈ 23ಕ್ಕೆ ನಡೆಸಲು ನಿರ್ಧರಿಸಿದ ಪರೀಕ್ಷೆಯನ್ನು ಮುಂದೂಡಬೇಕೆಂದು ಅಲ್ಲಿಸಲಾದ ಅರ್ಜಿಯಲ್ಲಿ ಜಸ್ಟಿಸ್ ಎಲ್.ನಾಗೇಶ್ವರ ರಾವ್ ಅಧ್ಯಕ್ಷತೆಯ ದ್ವಿಸದಸ್ಯ ಪೀಠ ತಳ್ಳಿಹಾಕಿದೆ.

ಜಸ್ಟಿಸ್ ಫಾರ್ ಆಲ್ ಎಂಬ ಸಂಘಟನೆ ಸಾರ್ವತ್ರಿಕ ಪ್ರವೇಶ ಪರೀಕ್ಷೆಯನ್ನು ಮುಂದೂಡಬೇಕೆಂದು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಎಲ್ಲ ಕೊರೋನ ಮುಂಗಣನೆ ಕ್ರಮಗಳನ್ನು ಕಠಿಣವಾಗಿ ಪಾಲಿಸಬೇಕೆಂದು ಕೋರ್ಟು ಸೂಚಿಸಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ವ್ಯಾಕ್ಸಿನ್ ತೆಗೆಯುವ ವಿಚಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಠತೊಡಬಾರದೆಂದು ತಿಳಿಸಿತು.

ಈ ವರ್ಷ 80,000 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಕೊನೆಯ ಕ್ಷಣದಲ್ಲಿ ಅರ್ಜಿ ಹಿಡಿದುಕೊಂಡು ಬರಬೇಡಿ ಜಸ್ಟಿಸ್ ಎಲ್. ನಾಗೇಶ್ವರ ರಾವ್ ಹೇಳಿದರು. ಕೊರೋನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರುವವರೆಗೆ ಬೇರೆ ರೀತಿಯಂತೆ ಪರೀಕ್ಷೆಯನ್ನು ನಡೆಸಿಕೊಡಬೇಕೆಂದು ಅರ್ಜಿದಾರರು ಆಗ್ರಹಿಸುತ್ತಿದ್ದಾರೆ.