ಕೋಸ್ಟಲ್ ಫ್ರೆಂಡ್ಸ್ ಮಂಗಳೂರು: ಅಧ್ಯಕ್ಷರಾಗಿ ಶಮೀರ್ ಲಕ್ಕಿಸ್ಟಾರ್, ಉಪಾಧ್ಯಕ್ಷ ನಝೀರ್ ಬೆದ್ರೋಡಿ ಪ್ರಧಾನ ಕಾರ್ಯದರ್ಶಿಯಾಗಿ ಇಮ್ತಿಯಾಝ್ ಹಜ್ಜಾಜ್ ಆಯ್ಕೆ

0
170

ಸನ್ಮಾರ್ಗ ವಾರ್ತೆ

ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (ರಿ.) ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (ರಿ.) ಸಂಸ್ಥೆಯ ವಾರ್ಷಿಕ ಮಹಾಸಭೆ (AGM) ಬಾಂಬೆ ಲಕ್ಕಿ ರೆಸ್ಟೋರೆಂಟ್ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷ ಶರೀಫ್ ಅಬ್ಬಾಸ್ ವಳಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಈನ್ ಅವರು ಪವಿತ್ರ ಕುರ್‌ಆನ್ ಪಠಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ಶೌಕತ್ ಅಲಿಯವರು ವಾರ್ಷಿಕ ವರದಿಯನ್ನು ಮಂಡಿಸಿದರು. ಜೊತೆ ಕಾರ್ಯದರ್ಶಿ ಜುನೈದ್ ಅವರು ಸಂಸ್ಥೆಯ ಮೆಡಿಕಲ್ ಬೆಡ್ ಸೇವೆಯ ವಾರ್ಷಿಕ ವಿವರವನ್ನು ಸಭೆಗೆ ಸಲ್ಲಿಸಿದರು. ಖಜಾಂಚಿ ಇಮ್ತಿಯಾಝ್ ಎಸ್.ಎಂ ಅವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಬಳಿಕ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳ ಕುರಿತು ಸದಸ್ಯರು ಮುಕ್ತ ಚರ್ಚೆ ನಡೆಸಿ ಸರ್ವಾನುಮತದಿಂದ ಅನುಮೋದಿಸಿದರು.

ಆ ಅವಧಿಯ ಅಧ್ಯಕ್ಷರಾದ ಶರೀಫ್ ಅಬ್ಬಾಸ್ ಅವರು ಕೋಸ್ಟಲ್ ಸಂಸ್ಥೆಯ ಸಾಧನೆಗಳು ಹಾಗೂ ಮುಂದಿನ ಯೋಜನೆಗಳ ಕುರಿತು ಮಾತನಾಡಿದರು. ಗೌರವಾಧ್ಯಕ್ಷರಾದ ಆಸಿಫ್ ಸೂರಲ್ಪಾಡಿ ಸಂದರ್ಭೋಚಿತವಾಗಿ ಮಾತನಾಡಿದರು.

ಬಳಿಕ ಸಲೀಂ ಅಬ್ಬಾಸ್ ವಳಾಲ್, ಆಸಿಫ್ ಸುರಲ್ಪಾಡಿ, ಮುಸ್ತಫಾ ದಮ್ಮಾಲೆ ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಚುನಾವಣಾ ಪ್ರಕ್ರಿಯೆ ನಡೆಸಲಾಯಿತು.

2026–2027ನೇ ಅವಧಿಗೆ ಸಂಸ್ಥೆಯ ಅಧ್ಯಕ್ಷರಾಗಿ ಶಮೀರ್ ಲಕ್ಕಿಸ್ಟಾರ್, ಉಪಾಧ್ಯಕ್ಷರಾಗಿ ಅಡ್ವಕೇಟ್. ನಝೀರ್ ಬೆದ್ರೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಇಮ್ತಿಯಾಝ್ ಹಜ್ಜಾಜ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ಅಫ್ತಾಬ್ ಬಸ್ತಿಕಾರ್ ಅವರು ಹಾಗೂ ಖಜಾಂಚಿಯಾಗಿ ಸಾಜಿದ್ ಒಡೆಯರ್ ಸರ್ವಾನುಮತದಿಂದ ಆಯ್ಕೆಯಾದರು. ಇದರೊಂದಿಗೆ ಒಟ್ಟು 11 ಮಂದಿ ಸದಸ್ಯರನ್ನು ಒಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ನೂತನ ಅಧ್ಯಕ್ಷರು ಮಾತನಾಡಿ, ಸದಸ್ಯರ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿ, ಸಂಘಟನೆಯ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಇನ್ನಷ್ಟು ಬಲಪಡಿಸುವ ಭರವಸೆ ನೀಡಿದರು.

ಮುನ್ನ ಕಮ್ಮರಡಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ದುಆದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡು, ಬಳಿಕ ಸದಸ್ಯರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.