ಮಜ್ಲಿಸುಲ್ ಉಲಮಾ ತಹ್ರೀಕ್ ಇಸ್ಲಾಮೀ ಹಿಂದ್, ಕರ್ನಾಟಕ ವತಿಯಿಂದ ಧರ್ಮ ಗುರುಗಳ ಸಮ್ಮೇಳನ

0
133

ಸನ್ಮಾರ್ಗ ವಾರ್ತೆ

ವಿಜಯಪುರ: ಮಜ್ಲಿಸುಲ್ ಉಲಮಾ ತಹ್ರೀಕ್ ಇಸ್ಲಾಮೀ ಹಿಂದ್, ಕರ್ನಾಟಕ ವತಿಯಿಂದ ‘ದೇಶದ ಪ್ರಸಕ್ತ ಪರಿಸ್ಥಿತಿಯಲ್ಲಿ ಧರ್ಮ ಗುರುಗಳ ಪಾತ್ರ’ ಎಂಬ ವಿಷಯದಲ್ಲಿ ಧರ್ಮ ಗುರುಗಳ ಸಮ್ಮೇಳನವು ವಿಜಯಪುರ ಜಮಾಅತೆ ಇಸ್ಲಾಮೀ ಹಿಂದ್ ಕಛೇರಿಯಲ್ಲಿ ಜರುಗಿತು.

ಸಮ್ಮೇಳನವನ್ನುದ್ದೇಶಿಸಿ ಮೌಲಾನಾ ವಹೀದುದ್ದೀನ್ ಖಾನ್ ಉಮರಿ ಅಧ್ಯಕ್ಷರು ಮಜ್ಲಿಸುಲ್ ಉಲಮಾ ಕರ್ನಾಟಕ, ಮಾತಾಡುತ್ತ ನಮ್ಮ ದೇಶ ಭಾಂಧವರಲ್ಲಿ ಇಸ್ಲಾಮಿನ ಬಗ್ಗೆ ಇರುವ ತಪ್ಪುಕಲ್ಪನೆಗಳನ್ನು ಹೊಗಲಾಡಿಲು ಧರ್ಮಗುರುಗಳು ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕು. ಜತೆಗೆ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಬೇಕೆಂದು ಅವರು ಹೇಳಿದರು.

ಮುಂದೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರು ಮಹತ್ವದ ಪಾತ್ರವನ್ನು ವಹಿಸಬೇಕಾಗಿದೆ ಎಂದು ಮೌಲಾನ ರಿಜ್ವಾನ್ ತಯ್ಯಿಬ್ ಹೇಳಿದರು.

ಮೌಲಾನ ವಕೀಲ್ ಅಹಮದ್ ಮಾತನಾಡಿ, ಮುಸ್ಲಿಮರು ತಮ್ಮ ಜೀವನದ ಮೂಲಕ ಇತರರಿಗೆ ಮಾದರಿಯಾಗಬೇಕು. ಭಿನ್ನಾಭಿಪ್ರಾಯಗಳನ್ನು ಬದೆಗಿಟ್ಟು ಬಾಳಬೇಕು ಎಂದರು.

ಮೌಲಾನಾ ಸಯ್ಯದ್ ಸಾದಾತ್ ಮಾತನಾಡಿ, ನಮ್ಮ ನಡವಳಿಕೆಗಳನ್ನು ಸರಿಪಡಿಸಬೇಕು. ಮುಸ್ಲಿಮರು ತಮ್ಮ ಜವಾಬ್ದಾರಿಗಳನ್ನು ಅರಿತು ಜೀವಿಸಬೇಕು.

ಮೌಲಾನಾ ಜಾಮಿಯಾ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಜನಾಬ್ ಬಡಗನ ಉಪಸ್ಥಿತರಿದ್ದರು. ಸಮದಾನಿ ಖಾಜಿ ಕಾರ‍್ಯಕ್ರಮ ನಿರೂಪಿಸಿದರು. ಇಮಾಮ್ ಕಾಸಿಮ್ ಅದ್ಯಕ್ಷರು ಧನ್ಯವಾದ ಸಮರ್ಪಿಸಿದರು. ಸಭೆಯಲ್ಲಿ ನಗರದ ಬಹಳಷ್ಟು ಧರ್ಮಗುರುಗಳು, ಜಮಾತಿನ ಸದಸ್ಯರು, ಗಣ್ಯರು ಭಾಗವಹಿಸಿದ್ದರು.