ಕಾಂಗ್ರೆಸ್ ಎಂದರೆ ಗಾಂಧಿ ಕುಟುಂಬವಲ್ಲ, ಅದು ಭಾರತ ನಿರ್ಮಿಸಿದ ಆಶಯ- ಪ್ರಿಯಾಂಕಾ ಗಾಂಧಿ

0
972

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕಾಂಗ್ರೆಸ್ ಅಂದರೆ ಗಾಂಧಿ ಕುಟುಂಬ ಅಲ್ಲ. ಭಾರತ ನಿರ್ಮಿಸಿದ ಆಶಯ ಕಾಂಗ್ರೆಸ್. ಇದರಲ್ಲಿ ಗಾಂಧಿ ಕುಟುಂಬ ಅಪ್ರಸಕ್ತವಾಗಿದೆ. ಅಸ್ಸಾಮಿನಲ್ಲಿ ಇಂಡಿಯ ಟುಡೆಗೆ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕಾ ಗಾಂಧಿ ಹೀಗೆ ಹೇಳಿದ್ದಾರೆ. ಕುಟುಂಬ ಇರಲಿ, ನಾಯಕನೇ ಆಗಿರಲಿ, ಆಶಯಕ್ಕೆ ಪ್ರಾಮುಖ್ಯತೆ ಇರುತ್ತದೆ. ಈ ಆಶಯ ಸಕ್ರಿಯವಾಗಿ ಮುಂದುವರಿಯುವುದು. ಕಾಂಗ್ರೆಸ್ ಇರುವಷ್ಟು ಕಾಲ ಈ ಆಶಯವನ್ನು ಅಳವಡಿಸಿಕೊಳ್ಳುತ್ತದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಅಸ್ಸಾಮಿನಲ್ಲಿ ಚುನಾವಣಾ ಪ್ರಚಾರದಲ್ಲಿ ಪ್ರಿಯಾಂಕಾ ಗಾಂಧಿ ಭಾಗಿಯಾಗಿದ್ದಾರೆ. ಅಸ್ಸಾಮಿನಲ್ಲಿ ಕಠಿಣ ಹೋರಾಟ ನಡೆಯಲಿದೆ. ಈ ಹೋರಾಟ ಬಿಜೆಪಿಯ ವಿರುದ್ಧ ಮಾತ್ರವಲ್ಲ ಅವರ ಆಶಯಗಳ ವಿರುದ್ಧ ಆಗಿದೆ. ಅಸ್ಸಾಮಿನ ಅಸ್ಮಿತೆಗೆ ವಿರುದ್ಧವಾಗಿರುವ ಬಿಜೆಪಿಯ ನಡವಳಿಕೆಯ ವಿರುದ್ಧ ಹೋರಾಟವಿದು ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.