ಮದುವೆಯಾಗದವರಿಗೂ ಕೃತಕ ಗರ್ಭಧಾರಣೆ ಹಕ್ಕು ನೀಡಬೇಕು: ಕುಟುಂಬ ಕಲ್ಯಾಣ ಸಮಿತಿ ಶಿಫಾರಸು

0
374

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಮದುವೆ ಆಗದಿದ್ದರೂ 21 ವರ್ಷ ಮೇಲ್ಪಟ್ಟ ಯಾವುದೇ ಮಹಿಳೆಯೂ ಕೃತಕ ಗರ್ಭಧಾರಣೆ ಮಾಡಿಸಿಕೊಳ್ಳುವುದಕ್ಕೆ ಕಾನೂನುಬದ್ಧ ಹಕ್ಕನ್ನು ನೀಡಬೇಕು ಎಂದು ಆರೋಗ್ಯ, ಕುಟುಂಬ ಕಲ್ಯಾಣದ ಪಾರ್ಲಿಮೆಂಟರಿ ಸಮಿತಿ ಶಿಫಾರಸು ಮಾಡಿದೆ. ಬಂಜೆ ಚಿಕಿತ್ಸೆ, ದತ್ತು ಪಡೆಯುವುದು ನೋಂದಣಿ ನಿಯಂತ್ರಿಸಲು ಪ್ರತಿಯೊಂದು ರಾಜ್ಯಗಳು ನೋಂದಣಿ ಅಥಾರಿಟಿ ಸ್ಥಾಪಿಸಬೇಕು. ನಿರ್ದಿಷ್ಟ ದತ್ತು ಕಾನೂನು ಇದಕ್ಕಾಗಿ ತಿದ್ದುಪಡಿ ಮಾಡಬೇಕು. ಪಾರ್ಲಿಮೆಂಟಿನಲ್ಲಿ ಸಮಿತಿ 129ನೇ ವರದಿಯಲ್ಲಿ ಈ ಶಿಫಾರಸ್ಸು ಮಾಡಿದೆ.

ಒಂದೇ ಲಿಂಗದವರ ಸಂಬಂಧ ಸುಪ್ರೀಂಕೋರ್ಟು ಅಪರಾಧ ಮುಕ್ತಗೊಳಿಸಿಯೂ ಇಂತಹ ದಂಪತಿಗಳ ವ್ಯವಸ್ಥೆ ಕಾನೂನಿನಲ್ಲಿ ಒಳಪಡಿಸಿಲ್ಲ ಎಂದು ಸಮಿತಿ ಬೆಟ್ಟುಮಾಡಿದೆ. ಮದುವೆ ಆಗಿ ಒಟ್ಟಿಗೆ ಬದುಕುವ ದಂಪತಿಗಳ ವಿಷಯದಲ್ಲಿ ಕಾನೂನು ಏನು ಹೇಳುವುದಿಲ್ಲ ಎಂದು ಸಮಿತಿ ಹೇಳಿದೆ. ಮದುವೆಯಾಗದೆ ಒಟ್ಟಿಗೆ ಜೀವಿಸುವವರೂ ಒಂದೇ ಲಿಂಗದ ದಂಪತಿಗಳು ಕೃತಕ ಗರ್ಭಧಾರಣೆಗೆ ಅನುಮತಿ ಕೇಳಿದರೆ ನೀಡಬೇಕೆಂದು ಸಮಿತಿ ಹೇಳುತ್ತದೆ. ಗರ್ಭಧಾರಣೆಯ ವಯೋಮಿತಿ 21 ವರ್ಷ ನಿಶ್ಚಯಿಸಿದರೆ ಸಾಕು. ಅವರು ಮದುವೆಯಾಗಬೇಕೆಂದಿಲ್ಲ. ರಾಷ್ಟ್ರೀಯ ದತ್ತು ಪಡೆಯುವ ಮಂಡಳಿ ಕೃತಕ ಗರ್ಭಧಾರಣೆ ತಂತ್ರಜ್ಞಾನ ನಿಯಂತ್ರಿಸುವುದರಿಂದ ಮಂಡಳಿಯಲ್ಲಿ ಅದನ್ನೊಳಪಡಿಸಬೇಕೆಂದು ಸಮಿತಿ ಶಿಫಾರಸ್ಸು ನೀಡಿದೆ.