ಕೊರೋನ ಮೂರನೆಯ ಪ್ರಭೇದ: ಜರ್ಮನಿಯಲ್ಲಿ ಎಪ್ರಿಲ್ 18ರವರೆಗೆ ಲಾಕ್‍ಡೌನ್; ಮೂರು ದಿನ ಕರ್ಫ್ಯೂ

0
457

ಸನ್ಮಾರ್ಗ ವಾರ್ತೆ

ಬರ್ಲಿನ್, ಮಾ.23: ಕೊರೊನ ಅತಿವೇಗದಲ್ಲಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜರ್ಮನಿಯಲ್ಲಿ 18 ದಿನ ಲಾಕ್‍ಡೌನ್ ಅಳವಡಿಸಿದ್ದಾಗಿ ಚಾನ್ಸಲರ್ ಆಂಗಲಾ ಮರ್ಕೆಲ್ ಹೇಳಿದರು. ಈ ಹಿಂದೆ ಮಾರ್ಚ್ 28ರವರೆಗೆ ಲಾಕ್‍ಡೌನ್ ಘೋಷಿಸಿದ್ದರು. ಅದನ್ನೀಗ ಮುಂದುರಿಸಿದ್ದು ಎಪ್ರಿಲ್ ಐದರವರೆಗೆಯಾರೂ ಮನೆಯಿಂದ ಹೊರಗೆ ಬರಬರುವಂತಿಲ್ಲ. ಮನೆಯಲ್ಲೇ ಇರಬೇಕೆಂದು ಅವರು ಆಗ್ರಹಿಸಿದ್ದಾರೆ. 16 ರಾಜ್ಯ ಸರಕಾರಗಳೊಂದಿಗೆ ಚರ್ಚಿಸಿ ಲಾಕ್‍ಡೌನ್ ಮುಂದುವರಿಸಲು ತೀರ್ಮಾನಿಸಲಾಗಿದ್ದು ಪ್ರತಿದಿನ ಕೊರೋನ ಅಮೆರಿಕಕ್ಕಿಂತಲೂ ಹೆಚ್ಚಿದೆ. ವೈರಸ್‍ನ ಮೂರನೆ ಹಂತದಿಂದ ದೇಶ ನಲುಗುತ್ತಿದೆ. ವೈರಸ್‍ನ ಮೂರನೇ ಪ್ರಭೇದವೂ ಪತ್ತೆಯಾಗಿದೆ ಎಂದು ಮಾರ್ಕೆಲ್ ಹೇಳಿದರು.

ಸೋಮವಾರ ಒಂದು ಲಕ್ಷದಲ್ಲಿ 107 ಮಂದಿಗೆಂಬಂತೆ ಕೊರೋನ ದೃಢಪಟ್ಟಿತು. ಮೂರು ವಾರ ಹಿಂದೆ 60 ಮಂದಿಗೆ ವೈರಸ್ ಬಾಧೆ ಕಂಡು ಬಂದಿತ್ತು. ಹೊಸದಾಗಿ ವೈರಸ್ಸಿನ ಮೂರನೆ ಪ್ರಭೇದ ಕಂಡು ಬಂದಿದೆ. ಇದು ತುಂಬ ಭಿನ್ನ ರೀತಿಯ ವೈರಸ್. ಹಿಂದಿನದ್ದಕ್ಕೆ ಹೋಲಿಸಿದರೆ ಸಾವಿನ ಸಂಖ್ಯೆ ಹೆಚ್ಚಳವಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.