ದೆಹಲಿಯಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನಕ್ಕೆ ಅರ್ಹವಾಗಿಲ್ಲ; ಮೈತ್ರಿ ಧರ್ಮವನ್ನು ಪರಿಗಣಿಸಿ ಒಂದು ಸೀಟು ನೀಡಲಾಗುವುದು-ಎಎಪಿ

0
139

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಲೋಕಸಭೆಯ ಚುನಾವಣೆಯಲ್ಲಿ ಏಳು ಸೀಟುಗಳಲ್ಲಿ ಒಂದು ಸೀಟು ಮಾತ್ರ ಕಾಂಗ್ರೆಸ್ಸಿಗೆ ಬಿಟ್ಟುಕೊಡುವುದಾಗಿ ಆಮ್ ಆದ್ಮಿ ಪಾರ್ಟಿ ಸಂಸದ ಸಂದೀಪ್ ಪಾಠಕ್ ಹೇಳಿದರು.

ಕಾಂಗ್ರೆಸ್ ದಿಲ್ಲಿಯಲ್ಲಿ ಒಂದು ಸೀಟು ಗೆಲ್ಲುವ ತಾಕತ್ತು ಹೊಂದಿಲ್ಲ. ಆದರೆ ಸಖ್ಯ ಧರ್ಮ ಪಾಲಿಸಿ ನಾವು ಅವರಿಗೆ ಒಂದು ಸೀಟು ಕೊಡುತ್ತೇವೆ ಎಂದು ಹೇಳಿದರು.

ಇಂಡಿಯ ಸಖ್ಯದ ಪ್ರಮುಖ ಪಕ್ಷವಾದ ಕಾಂಗ್ರೆಸ್ ಆಮ್ ಆದ್ಮಿಪಾರ್ಟಿಯು ಪರಸ್ಪರ ಸೀಟು ಹಂಚಿಕೆ ಚರ್ಚೆಗಳು ಪ್ರಗತಿಯಲ್ಲಿದೆ ಇದೇ ವೇಳೆ ಎಎಪಿ ಹೇಳಿಕೆ ನೀಡಿದೆ.

ಮೆರಿಟ್ ನೋಡಿದರೆ ಕಾಂಗ್ರೆಸ್‍ಗೆ ದಿಲ್ಲಿಯಲ್ಲಿ ಒಂದು ಸೀಟು ಪಡೆಯುವ ಅರ್ಹತೆಯಿಲ್ಲ. ಆದರೆ ಸಖ್ಯ ಧರ್ಮ ಪಾಲಿಸಿ ನಾವು ಅವರಿಗೆ ಒಂದು ಸೀಟು ಬಿಟ್ಟು ಕೊಡುತ್ತೇವೆ. ಕಾಂಗ್ರೆಸ್ ಒಂದು ಸೀಟಿನಲ್ಲಿ ಆಮ್ ಆದ್ಮಿ ಪಾರ್ಟಿ ಆರು ಸೀಟುಗಳಲ್ಲಿ ಸ್ಪರ್ಧಿಸಲಿದೆ .

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಒಂದು ಸೀಟು ಕೂಡ ಸಿಕ್ಕಿಲ್ಲ. ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ 250 ಸೀಟುಗಳಲ್ಲಿ ಒಂಬತ್ತು ಸೀಟು ಮಾತ್ರ ಅವರಿಗೆ ಲಭಿಸಿದ್ದು ಎಂದು ಸಂದೀಪ್ ಪಾಠಕ್ ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಬಿಜೆಪಿಯನ್ನು ಸೋಲಿಸಿತು. ದಿಲ್ಲಿಯಲ್ಲಿ ನಿರಂತರವಾಗಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಚುನಾವಣೆಯ ಹಿನ್ನಡೆ ಮರೆಯುವ ತೀವ್ರ ಶ್ರಮದಲ್ಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ದಿಲ್ಲಿಯಲ್ಲಿ ಏಳು ಸೀಟುಗಳಲ್ಲಿ ಬಿಜೆಪಿ ಜಯ ಗಳಿಸಿತ್ತು. ಪಂಜಾಬ್‍ನಲ್ಲಿ ಎಎಪಿ ಒಂದೇ ಪಾರ್ಟಿಯಾಗಿ ಸ್ಪರ್ಧಿಸುತ್ತದೆ ಎಂದು ಪಾಠಕ್ ಹೇಳಿದರು.