ಮೇಲ್ಜಾತಿ ಮೀಸಲಾತಿ ಸಂವಿಧಾನ ಬದ್ಧವಲ್ಲ: ಜ‌ಸ್ಟೀಸ್ ಚೇಲಮೇಶ್ವರ

0
745

“ಸುಪ್ರೀಮ್ ಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ಜ. ಜೆ. ಚಲಮೇಶ್ವರ ರವರು ಭಾರತೀಯ ಸಂವಿಧಾನವು ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದೆಯೇ ಹೊರತು ಆರ್ಥಿಕ ಹಿಂದುಳಿದವರಿಗೆ ಮೀಸಲಾತಿಯನ್ನು ಕಲ್ಪಿಸಿಲ್ಲ” ಎಂದಿದ್ದಾರೆ.

ಅವರು “ಸಂವಿಧಾನದ ಏಳು ದಶಕಗಳು” ಎಂಬ ಶೀರ್ಷಿಕೆಯಡಿಯಲ್ಲಿ ಅಂಬೇಡ್ಕರ್ ಪೆರಿಯಾರ್ ಪುಲೆ ಸ್ಟಡಿ ಸರ್ಕಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಮ್ಮ ಚೊಚ್ಚಲು ಅಂಬೇಡ್ಕರ್ ಸ್ಮರಣ ಉಪನ್ಯಾಸವನ್ನು ನೀಡಿದರು. IITಬಾಂಬೆ ಕಾಲೇಜಿನ ವಿದ್ಯಾರ್ಥಿಯು ಕೇಳಿದ ಪ್ರಶ್ನೆಯೊಂದನ್ನು ಉದ್ದೇಶಿಸಿ ಅವರು ಈ ಉತ್ತರ ವನ್ನು ನೀಡಿದರು.

“ಸಂಸತ್ತು ಸಂವಿಧಾನವನ್ನು 124 ನೇ ತಿದ್ದುಪಡಿಗೊಳಪಡಿಸುವ ಮೂಲಕ 10% ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿಯನ್ನು ಸಾಮಾನ್ಯ ವರ್ಗ ಕೆಟಗರಿ ವಿಭಾಗಕ್ಕೆ ಘೋಷಿಸಿದೆ. ಈ ಮೀಸಲಾತಿಯನ್ನು ವಿರೋಧಿಸಿ ಈಗಾಗಲೇ ಸುಪ್ರೀಂ ಕೋರ್ಟ್‍ನಲ್ಲಿ ಮನವಿ ಸಲ್ಲಿಕೆಯಾಗಿದೆ” ಎಂದರು.

ಈ ನಡುವೆ ವಿದ್ಯಾರ್ಥಿಯೊಬ್ಬರು ನಿವೃತ್ತ ನ್ಯಾಯಮೂರ್ತಿಗಳನ್ನು ಸರಕಾರಿ ಉದ್ಯೋಗಗಳಿಗೆ ನೇಮಕ ಮಾಡುವುದರ ಕುರಿತು ಕೇಳಿದಾಗ, “ಸರಕಾರಿ ಉದೋಗ್ಯವನ್ನು ನಿರಾಕರಿಸಿರುವುದು ನನ್ನ ವೈಯಕ್ತಿಕ ಆಯ್ಕೆ” ಎಂದರು.

ಈ ಸಂದರ್ಭದಲ್ಲಿ ಅವರು ಸಂವಿಧಾನಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರಲ್ಲದೇ ನ್ಯಾಯಾಂಗೀಯ ಸುಧಾರಣಾ ಪ್ರಕ್ರಿಯೆಗಳ ಅಗತ್ಯತೆ ಇರುವ ಕುರಿತು ಒತ್ತಿ ಹೇಳಿದರು.