‘ಕಪಡಾ ಬ್ಯಾಂಕಿಗೆ’ ಚಾಲನೆ ನೀಡಿದ ವಿಜಯಪುರ ಜಮಾಅತೆ ಇಸ್ಲಾಮೀ

0
635

ವಿಜಯಪುರ: ಜಮಾಅತೆ ಇಸ್ಲಾಮಿ ಹಿಂದ್ ಕಚೇರಿಯಲ್ಲಿ ಕಪಡಾ ಬ್ಯಾಂಕಿನ ಉದ್ಘಾಟನೆ ಸಮಾರಂಭ ರಿಬ್ಬನ್  ಕತ್ತರಿಸುವ ಮೂಲಕ ನೆರವೇರಿಸಲಾಯಿತು.ಬಡವರು, ನಿರ್ಗತಿಕರಿಗೆ ಜಾತಿ, ಮತಭೇದವಿಲ್ಲದೆ ಹೊಸ ಬಟ್ಟೆಗಳನ್ನು ಹಂಚುವ ಉದ್ದೇಶವನ್ನು ಈ ಬ್ಯಾಂಕ್ ಹೊಂದಿದ್ದು ದಾನಿಗಳ ಮತ್ತು ಸಾಮಾನ್ಯ ಜನರಿಂದ ಲಭಿಸುವ ಬಟ್ಟೆಗಳನ್ನು ಈ ಬ್ಯಾಂಕಿನ ಆಧಾರವಾಗಿರಿಸಿಕೊಂಡಿದೆ.ನಗರದ ಸುತ್ತಮುತ್ತಲಿನಲ್ಲಿರುವ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಜನರ ಜೀವನವು ದಯನೀಯವಾಗಿದ್ದು ಅಲ್ಲಿನ ಮಕ್ಕಳು ಸೇರಿದಂತೆ ಕುಟುಂಬಗಳ ಸದಸ್ಯರಿಗೆ ಉತ್ತಮ ಬಟ್ಟೆಗಳನ್ನು ನೀಡುವ ಯೋಜನೆಯನ್ನು ಜಮಾಅತೆ ಇಸ್ಲಾಮೀ ಹೊಂದಿದೆ.

ಈ ಸಂದರ್ಭದಲ್ಲಿ ನಾಸಿರ್ ರವರು ಪ್ರಾಸ್ತಾವಿಕವಾಗಿ ಮಾತಾಡಿದರು. ನ್ಯಾಯವಾದಿಗಳಾದ ಬಸೀರ್ ಲಾಹೋರಿ ಮಾತನಾಡುತ್ತ, ಬಡವರ, ನಿರ್ಗತಿಕರ ಸಹಾಯ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ  ಎಂದು ಹೇಳಿದರು. ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷರಾದ ಭರತೇಶ ಕಲಗೊಂಡ ಮಾತನಾಡಿ, ದೇವರು ಒಬ್ಬನೇ. ಮನುಷ್ಯ  ಹೋಗುವಾಗ ಎಲ್ಲವನ್ನೂ ಬಿಟ್ಟು ಹೋಗುತ್ತಾನೆ. ಆದರೆ ಅವನು ಮಾಡಿದ ಕರ್ಮಗಳು ಅವನ ಜೊತೆಗೆ ಹೋಗುತ್ತವೆ ಎಂದರು.

ಅಲ್ ಅಮೀನ್ ಸಂಸ್ಥೆಯ ನಿರ್ದೇಶಕರಾದ ಬಿ.ಎಸ್. ಪಾಟೀಲ ಮಾತ ನಾಡುತ್ತ, ಯಾವುದೇ ಕೆಲಸಕ್ಕೆ ಪ್ರೇರಕ ಶಕ್ತಿ ಬೇಕು. ಆ ಶಕ್ತಿ ಡಾ.ಅಮೀರ ಖುಶ್ರು ಖಾಜಿ ಅವರಲ್ಲಿ ಅಡಗಿದೆ ಎಂದರು. ಅಸ್ಲಮ ಮುಜಾವರ ಎಂ.ಎಂ.ಸಿ. ಉಪಾಧ್ಯಕ್ಷ, ವಿ.ಎಸ್. ಖಾಡೆ ಸಂದರ್ಭೋಚಿತವಾಗಿ ಮಾತಾಡಿದರು. ಅಧ್ಯಕ್ಷತೆ ವಹಿಸಿದ್ದ ಮಹಮ್ಮದ್ ಯೂಸೂಫ್ ಖಾಜಿ, ವಿಜಯಪುರ ನಗರದ ಸುತ್ತಮುತ್ತಲು ಸುಮಾರು  90ಕ್ಕಿಂತ ಹೆಚ್ಚು ಕೊಳಚೆ ಪ್ರದೇಶಗಳು ಇವೆ. ಇಲ್ಲಿ ವಾಸಿಸುವವರ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಇಂತವರಿಗೆ ಎಲ್ಲ ರೀತಿ ಯಿಂದಲೂ  ಸಹಾಯ ಮಾಡುವುದು ಪ್ರತಿಯೊಬ್ಬರ ಕೆಲಸವಾಗಿದೆ ಎಂದರು.ನಜೀರ್ ಅಹ್ಮದ್ ಖಾಜಿ ಧನ್ಯವಾದವಿತ್ತರು. ಸಮದಾನಿ ಖಾಜಿ  ಕಾರ್ಯಕ್ರಮವನ್ನು ನಿರೂಪಿಸಿದರು.