ಕಾಶ್ಮೀರ: ಡೆಪ್ಯೂಟಿ ಕಮಿಷನರ್ ಕಚೇರಿ ಬಳಿ ಗ್ರೆನೆಡ್ ದಾಳಿ; ಹತ್ತು ಮಂದಿಗೆ ಗಾಯ

0
469

ಸನ್ಮಾರ್ಗ ವಾರ್ತೆ

ಜಮ್ಮು-ಕಾಶ್ಮೀರ,ಅ.5: ಜಮ್ಮು-ಕಾಶ್ಮೀರದ ಅನಂತ್‍ನಾಗ್‍ನಲ್ಲಿ ಡೆಪ್ಯೂಟಿ ಕಮಿಶನರ್ ಕಚೇರಿಯ ಹೊರಗೆ ಗ್ರೆನೆಡ್ ದಾಳಿ ನಡೆದಿದ್ದು, ಹನ್ನೆರಡು ವರ್ಷದ ಬಾಲಕ, ಪೊಲೀಸ್, ಪತ್ರಕರ್ತ ಸಹಿತ ಹತ್ತು ಮಂದಿ ಗಾಯಗೊಂಡಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀನಗರದಿಂದ 55 ಕಿಲೊ ಮೀಟರ್ ದೂರದ ಅನಂತ್‌ನಾಗ್‍ ನಗರದಲ್ಲಿ ಬೆಳಗ್ಗೆ 11 ಘಂಟೆಗೆ ಘಟನೆ ನಡೆದಿದೆ.

ಕಮಿಷನರ್ ಕಚೇರಿಯ ಹೊರಗೆ ಕರ್ತವ್ಯದಲ್ಲಿದ್ದ ಅಧಿಕಾರಿಯ ಮೇಲೆ ಭಯೋತ್ಪಾದಕರು ಗ್ರೆನೆಡ್ ದಾಳಿ ಮಾಡಿದರು. ಆದರೆ ಗುರಿ ತಪ್ಪಿ ರಸ್ತೆಗೆ ಬಿದ್ದು ಸ್ಫೋಟವಾಗಿದೆ. ದಾಳಿಯ ಹೊಣೆಯನ್ನು ಯಾರೂ ಈವರೆಗೆ ವಹಿಸಿಕೊಂಡಿಲ್ಲ. ಸೆಪ್ಟಂಬರ್ 28ಕ್ಕೆ ಶ್ರೀನಗದಲ್ಲಿ ಸಿಆರ್‍ಪಿಎಫ್‍ನ 38ನೆ ಬೆಟಾಲಿಯನ್ ಅಧಿಕಾರಿಯ ಮೇಲೆ ಗ್ರೆನೆಡ್ ಎಸೆಯಲಾಗಿತ್ತು. ಆದರೆ ಅವರು ಗಾಯಗಳಿಲ್ಲದೆ ಪಾರಾಗಿದ್ದಾರೆ. ಕೇಂದ್ರ ಸರಕಾರ ಆರ್ಟಿಕಲ್ 370 ರದ್ದು ಪಡಿಸಿದ ಬಳಿಕ ಎರಡನೆಯ ಭಯೋತ್ಪಾದಕ ಆಕ್ರಮಣ ಇದಾಗಿದೆ.