24 ವರ್ಷಗಳ ಹಿಂದಿನ ಪ್ರಕರಣದಲ್ಲಿ ರೈತನಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ! ಅಷ್ಟಕ್ಕೂ ರೈತನ ತಪ್ಪೇನು ಗೊತ್ತೆ!?

0
757

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.5: 24 ವರ್ಷಗಳ ಹಿಂದೆ ಹಾಲಿಗೆ ನೀರು ಸೇರಿಸಿ ಮಾರಿದ ಪ್ರಕರಣದಲ್ಲಿ ಉತ್ತರಪ್ರದೇಶದ ಹಾಲು ಉತ್ಪಾದಕ ರೈತರೊಬ್ಬರಿಗೆ ಆರು ತಿಂಗಳು ಜೈಲುಶಿಕ್ಷೆ ವಿಧಿಸಿ ಸುಪ್ರೀಂಕೋರ್ಟು ತೀರ್ಪು ನೀಡಿದೆ. ರಾಜ್‍ಕುಮಾರ್ ಶಿಕ್ಷೆಗೊಳಗಾದ ರೈತ. ಈತನನ್ನು ಕೂಡಲೇ ಶರಣಾಗುವಂತೆ ಕೋರ್ಟು ತಿಳಿಸಿದೆ.

1955ರಲ್ಲಿ ಪರಿಶೀಲಿಸಿದಾಗ 4.6 ಶೇಕಡಾ ಮಿಲ್ಕ್ ಫ್ಯಾಟ್, 7.8 ಶೇಕಡಾ ಮಿಲ್ಕ್ ಸಾಲಿಡ್ ನಾನ್ ಫ್ಯಾಟ್ ರಾಜ್‍ಕುಮಾರ್ ಮಾರಾಟ ಮಾಡುತ್ತಿದ್ದ ಹಾಲಿನಲ್ಲಿ ಕಂಡು ಬಂದಿತ್ತು. 8.5ಶೇಕಡಾ ಮಿಲ್ಕ್ ಸೋಲಿಡ್ ನಾನ್ ಫ್ಯಾಟ್ ಅಗತ್ಯವಿದೆ. ಹಿಂಡಿ ಮತ್ತು ಜಾನುವಾರುಗಳ ಆರೋಗ್ಯ ಇದಕ್ಕೆ ಕಾರಣವೆಂದು ರಾಜ್ ಕುಮಾರ್‌ರ ವಕೀಲರು ವಾದಿಸಿದ್ದರು.

ಹಾಲು ಪ್ರಥಮ ಆಹಾರ. ಸಣ್ಣ ಪ್ರಮಾಣದ ತಪ್ಪಾದರೂ ಆರೋಪಿ ತಪ್ಪಿತಸ್ಥ ಆದ್ದರಿಂದ ಹಾಲು ತಯಾರಕನಿಗೆ ಜಸ್ಟಿಸ್ ದೀಪಕ್ ಗುಪ್ತಾ, ಜಸ್ಟಿಸ್ ಅನಿರುದ್ಧ ಬೋಸ್‌ರಿದ್ದ ಸುಪ್ರೀಂಕೋರ್ಟು ಪೀಠವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.