ಕೊರೋನಾ: ಸಂಶೋಧನಾನಿರತ ಚೀನಾ ಮೂಲದ ಪ್ರೊಫೆಸರ್ ಅಮೆರಿಕಾದಲ್ಲಿ ಹತ್ಯೆ

0
1329

ವಾಷಿಂಗ್ಟನ್ ಮೇ 7

ಕೊರೋನಾಕ್ಕೆ ಸಂಬಂಧಿಸಿ ಸಂಶೋಧನೆಯಲ್ಲಿ ನಿರತರಾಗಿದ್ದ ಚೀನಾದ ಪ್ರೊಫೆಸರ್ ಒಬ್ಬರು ಅಮೆರಿಕದ ತನ್ನ ಮನೆಯಲ್ಲಿ ಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಿಟ್ಸ್ಬರ್ಗ್ ಮೆಡಿಕಲ್ ಸೆಂಟರ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಅಂಡ್ ಸಿಸ್ಟಮ್ಸ್ ಬಯೋಲಜಿ ವಿಭಾಗದಲ್ಲಿ ಸಂಶೋಧನಾ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದ ಡಾ. ಬಿಂಗ್ ಲಿಯು (37) ತಮ್ಮ ಮನೆಯಲ್ಲಿ ಗುಂಡೇಟಿಗೆ ಒಳಗಾಗಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಅದೇ ವೇಳೆ ಅವರನ್ನು ಹತ್ಯೆಗೈದವನೆಂದು ಶಂಕಿಸಲಾದ ವ್ಯಕ್ತಿ ಇವರ ಮನೆಗಿಂತ ನೂರು ಅಡಿ ದೂರದಲ್ಲಿ ಕಾರಿನಲ್ಲಿ ಗುಂಡೇಟಿನಿಂದ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಹಾವೊ ಗು (46) ಎಂಬ ವ್ಯಕ್ತಿ ಬಿಂಗು ಅವರನ್ನು ಹತ್ಯೆಗೈದ ಬಳಿಕ ಸ್ವಯಂ ಗುಂಡು ಹಾರಿಸಿಕೊಂಡು ಸಾವಿಗೀಡಾಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಕರಣವನ್ನು ಪರಿಶೀಲಿಸಿದಾಗ ಲಿಯು ಮತ್ತು ಹಂತಕನಿಗೆ ಪರಸ್ಪರ ಪರಿಚಯ ವಿತ್ತು ಎಂಬುದು ದೃಢವಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದ ಸಂದರ್ಭದಲ್ಲಿ ಲಿಯು ಅವರ ಪತ್ನಿ ಮನೆಯಲ್ಲಿರಲಿಲ್ಲ. ಲಿಯು ಅವರ ತಲೆ ಕತ್ತು ಮತ್ತು ಎದೆಗೆ ಗುಂಡು ಹರಿಸಲಾಗಿದೆ

ಕೊರೋನಾಕ್ಕೆ ಸಂಬಂಧಿಸಿ ಸಂಶೋಧನೆಯು ಅಂತಿಮ ಹಂತದಲ್ಲಿ ಇರುವಾಗಲೇ ಅವರ ಸಾವು ಸಂಭವಿಸಿದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಕೋರೋನಾ ವೈರಸ್ ಗೆ ಸಂಬಂಧಿಸಿ ಸೆಲ್ಯುಲರ್ ಮೆಕ್ಯಾನಿಕ್ ವಿಭಾಗದಲ್ಲಿ ಅವರು ಸಂಶೋಧನೆ ನಡೆಸುತ್ತಿದ್ದರು. ಇದಕ್ಕೆ ಸಂಬಂಧಿಸಿ ಕೆಲವು ನಿರ್ಣಾಯಕ ಮತ್ತು ಅತ್ಯಂತ ಅಗತ್ಯದ ಫಲಿತಾಂಶವನ್ನು ಅವರು ಪಡೆದುಕೊಂಡಿದ್ದರು ಎಂದು ವಿಶ್ವವಿದ್ಯಾಲಯ ಹೇಳಿಕೊಂಡಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.