ಕಮಲ್ ನಾಥ್ ಸರಕಾರಕ್ಕೆ ಆಮ್ಲಜನಕವಾದ ಕೊರೋನಾ

0
761

ಸನ್ಮಾರ್ಗ ವಾರ್ತೆ

ಭೋಪಾಲ, ಮಾ. 16: ಮಧ್ಯಪ್ರದೇಶದಲ್ಲಿ ವಿಶ್ವಾಸ ಮತದಾನ ನಡೆದಿಲ್ಲ. ಮುಂದಿನ ವಿಧಾನಸಭಾ ಕಲಾಪ ಮಾರ್ಚ್ 26ರಿಂದ ನಡೆಯಲಿದೆ. ರಾಜ್ಯಪಾಲ ಲಾಲಜಿ ಟಂಡನ್ ಒಂದು ನಿಮಿಷ ಮಾತ್ರ ನೀತಿ ಘೋಷಣಾ ಭಾಷಣ ಮಾಡಿದರು. ಸ್ಪೀಕರ್ ಎನ್‍ಪಿ ಪ್ರಜಾಪತಿ ಮುಂದಿನ ದಿನಾಂಕವನ್ನು ಸೂಚಿಸಿದರು. ಕೊರೊನ ವೈರಸ್ ಹರಡುತ್ತಿರುವ ಪರಿಸ್ಥಿತಿಯಲ್ಲಿ ಮುನ್ನೆಚ್ಚರಿಕೆಯ ಭಾಗವಾಗಿ ವಿಧಾನಸಭೆಯನ್ನು ತ್ವರಿತವಾಗಿ ಸಮಾಪನಗೊಳಿಸಲಾಗಿದೆ. ಬಹುಮತ ಸಾಬೀತಿಗೆ ಹತ್ತು ದಿವಸ ಸಮಯಾವಧಿ ಕಾಂಗ್ರೆಸ್‍ಗೆ ಸಿಕ್ಕಿದಂತಾಯಿತು.

ವಿಧಾನಸಭೆಯಲ್ಲಿ ಇಂದು ಬಹುಮತ ಸಾಬೀತುಪಡಿಸಬೇಕೆಂದು ರಾಜ್ಯಪಾಲರು ಮುಖ್ಯಮಂತ್ರಿ ಕಮಲನಾಥ್‍ರಿಗೆ ಹೇಳಿದ್ದರು. ರಾಜ್ಯಪಾಲರ ಭಾಷಣದ ಕೊನೆಯ ಪುಟವನ್ನು ಮಾತ್ರ ರಾಜ್ಯಪಾಲರು ಓದಿದರು. ಸರಕಾರ ಸಂವಿಧಾನವನ್ನು ಅನುಸರಿಸಬೇಕೆಂದು ಅವರು ಸೂಚಿಸಿದ್ದಾರೆ. ಕಾಂಗ್ರೆಸ್ ವಿಧಾನಸಭಾ ನಾಯಕ ಗೋವಿಂದ್ ಸಿಂಗ್ ಕೊರೊನಾ ವೈರಸ್ ಹರಡುತ್ತಿರುವ ಕುರಿತು ಸದನದಲ್ಲಿ ಪ್ರಸ್ತಾವ ಮಂಡಿಸಿದರು. ಇದರ ಬೆನ್ನಿಗೆ ಮಾರ್ಚ್ 26ರವರೆಗೆ ವಿಧಾನಸಭೆ ವಿಸರ್ಜಿಸಲಾಗಿದೆ ಎಂದು ಸ್ಪೀಕರ್ ಘೋಷಿಸಿದರು.

ವಿಶ್ವಾಸ ಮತಯಾಚನೆ ಸೋಮವಾರ ನಡೆಸಬೇಕೆಂದು ರಾಜ್ಯಪಾಲರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಇದನ್ನು ಬಿಜೆಪಿ ಶಾಸಕರು ಎತ್ತಿ ಹಿಡಿದು ತೋರಿಸಿದರು. ಇದು ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವಿನ ಅಭಿಪ್ರಾಯ ವಿನಿಮಯವೆಂದು ಸ್ಪೀಕರ್ ಹೇಳಿದರು. ಇದೇವೇಳೇ ವಿಶ್ವಾಸ ಮತಯಾಚನೆಗೆ ಶೀಘ್ರ ಆದೇಶಿಸಬೇಕೆಂದು ಸುಪ್ರೀಂಕೋರ್ಟಿಗೆ ಬಿಜೆಪಿ ಮೊರೆ ಹೋಗಿದೆ.