ಕೊರೋನಾವನ್ನು ಗುಣಪಡಿಸುವುದೆಂಬ ನಂಬಿಕೆ; ಇರಾನ್ ನಲ್ಲಿ ಮದ್ಯ ಸೇವನೆಯಿಂದ 700 ಕ್ಕೂ ಅಧಿಕ ಸಾವು-

0
670

ಸನ್ಮಾರ್ಗ ವಾರ್ತೆ

ವಿಷಕಾರಿ ಮೆಥನಾಲ್ (ಮದ್ಯ) ಸೇವಿಸಿದ ನಂತರ ಇರಾನ್‌ನಲ್ಲಿ 700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಕೊರೋನಾವನ್ನು ಗುಣಪಡಿಸಬಹುದು ಎಂದು ತಪ್ಪಾಗಿ ಭಾವಿಸಿದ ಕಾರಣದಿಂದ ಈ ಸಾವುಗಳು ಸಂಭವಿಸಿವೆ.

ಫೆಬ್ರವರಿ 20 ಮತ್ತು ಏಪ್ರಿಲ್ 7 ರ ನಡುವೆ ಆಲ್ಕೋಹಾಲ್ ಸೇವನೆಯಿಂದ 728 ಇರಾನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಸರಕಾರ ತಿಳಿಸಿದೆ. ಕಳೆದ ವರ್ಷ ಆಲ್ಕೋಹಾಲ್ ವಿಷದಿಂದ ಕೇವಲ 66 ಸಾವುಗಳು ಮಾತ್ರ ಸಂಭವಿಸಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮೆಥನಾಲ್ ಅನ್ನು ಪಾನೀಯಗಳಲ್ಲಿ ಬೆರೆಸಿದರೆ ವಾಸನೆ ಅಥವಾ ರುಚಿ ಗೊತ್ತಾಗುವುದಿಲ್ಲ. ಆದರೆ, ಇದು ನಿಧಾನವಾಗಿ ಅಂಗಾಂಗ ಮತ್ತು ಮೆದುಳಿಗೆ ಹಾನಿ ಉಂಟುಮಾಡುತ್ತದೆ. ಎದೆ ನೋವು, ವಾಕರಿಕೆ, ಹೈಪರ್ವೆಂಟಿಲೇಷನ್, ಕುರುಡುತನ ಮತ್ತು ಕೋಮಾ ಸಹ ಇದರ ಲಕ್ಷಣಗಳಾಗಿವೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.