ಕೋರೋನಾ ಸಾವು ಶಂಕೆ: ಹರ್ಯಾಣದಲ್ಲಿ ಶವಸಂಸ್ಕಾರದ ವೇಳೆ ಕಲ್ಲೆಸೆತ

0
778

ಸನ್ಮಾರ್ಗ ವಾರ್ತೆ

ಅಂಬಾಲ, ಎ. 28: ಅರುವತ್ತು ವಯಸಿನ ಮಹಿಳೆಯು ಮೃತಪಟ್ಟಿದ್ದು ಅವರ ಶವಸಂಸ್ಕಾರದ ವೇಳೆ ಸ್ಥಳೀಯ ನಿವಾಸಿಗಳು ಕಲ್ಲೆಸೆದಿರುವ ಘಟನೆ ನಡೆದಿದೆ. ಜನರಲ್ಲಿ ಮಹಿಳೆ ಕೊರೊನಾದಿಂದ ಮೃತಪಟ್ಟಿದ್ದಾರೆ ಎಂಬ ಶಂಕೆ ತಲೆದೋರಿದ್ದು ಇದಕ್ಕೆ ಕಾರಣವಾಗಿದೆ.

ಪ್ರತಿಭಟನಾಕಾರ ಸ್ಥಳೀಯ ಜನರು, ವೈದ್ಯರು ಮತ್ತು ಪೊಲೀಸರಿಗೆ ಕಲ್ಲೆಸೆದಿದ್ದಾರೆ. ಶವಸಂಸ್ಕಾರದ ವೇಳೆ ಅವರು ಉಪಸ್ಥಿತರಿದ್ದರು. ಲಾಕ್ ಡೌನ್ ಅನ್ನು ಜನರು ಉಲ್ಲಂಘಿಸಿದರು ಮತ್ತು ಕಲ್ಲು ಎಸೆಯಲು ತೊಡಗಿದರು. ಪರಿಸ್ಥಿತಿ ನಿಯಂತ್ರಣ ಮೀರಿ ಜನರನ್ನು ಚದರಿಸಲು ಪೊಲೀಸರು ಆಕಾಶಕ್ಕೆ ಗುಂಡು ಹಾರಿಸಿದರು. ಜನರು ಅಲ್ಲಿಂದ ಓಡಿ ಹೋದ ಬಳಿಕ ಶವಸಂಸ್ಕಾರ ಕಾರ್ಯ ನಡೆಯಿತು.

ಮಹಿಳೆ ಅಸ್ತಮಾ ರೋಗಿಯಾಗಿದ್ದು ಸೋಮವಾರ ಮಧ್ಯಾಹ್ನ ಉಸಿರಾಡಲು ಕಷ್ಟವಾಗಿತ್ತು. ಅಲ್ಲಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು ಮತ್ತು ಚೇತರಿಸಿಕೊಳ್ಳದೆ ಮೃತಪಟ್ಟಿದ್ದಾರೆ. ಮಹಿಳೆಗೆ ಕೊರೊನಾ ಇದೆಯೇ ಎಂದು ಪತ್ತೆಮಾಡಲು ಅವರ ಗಂಟಲಿನ ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೊರೊನಾ ಶಂಕೆ ಇರುವವರು ಮತ್ತು ಕೊರೊನಾ ಇರುವವರು ಮೃತರಾದರೆ ಸಮಾನ ರೀತಿಯ ನಿಬಂಧನೆಗಳನ್ನು ಪಾಲಿಸಿ ಶವಸಂಸ್ಕಾರ ಮಾಡಲಾಗುತ್ತದೆ. ಜನರಿಗೆ ತಿಳಿಹೇಳಿ ಸಾಕೋ ಸಾಕಾಯಿತು. ಪ್ರಯೋಜನವಾಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಕೊನೆಗೆ ಬಲಪ್ರಯೋಗ ಅನಿವಾರ್ಯವಾಯಿತೆಂದು ಅಮಬಾಲ್ ಡಿಎಸ್‍ಪಿ ರಾಂ ಕುಮಾರ ಹೇಳಿದರು.

ಅಂಬಾಲದಲ್ಲಿ 12 ಮಂದಿಗೆ ಕೊರೊನಾ ದೃಢಪಟ್ಟಿದ್ದು ಮೂವರು ಹರಿಯಾಣದಲ್ಲಿ ಮೃತಪಟ್ಟಿದ್ದಾರೆ. ಇದುವರೆಗೆ ರಾಜ್ಯದಲ್ಲಿ 289 ಮಂದಿಗೆ ರೋಗ ದೃಢವಾಗಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.