ಇಟಲಿಯಲ್ಲಿ 24 ಗಂಟೆಗಳಲ್ಲಿ 368 ಸಾವು; ಯುರೋಪಿನಲ್ಲಿ ಗಂಭೀರ ಸ್ಥಿತಿ

0
1068

ಸನ್ಮಾರ್ಗ ವಾರ್ತೆ

ಮ್ಯಾಡ್ರಿಡ್, ಮಾ.16: ಯುರೋಪಿನಲ್ಲಿ ಕೊರೊನಾ ವೈರಸ್ ಕೇಂದ್ರವೆಂದು ತಿಳಿಯಲಾದ ಇಟಲಿಯ ಪರಿಸ್ಥಿತಿ ತೀರಾ ಗಂಭೀರವಾಗಿದ್ದು 24 ಗಂಟೆಗಳಲ್ಲಿ 368 ಸಾವುಗಳ ಘಟನೆ ಸಂಭವಿಸಿದೆ. ಇದರೊಂದಿಗೆ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 1809ಕ್ಕೆ ತಲುಪಿತು. ಇತರ ಯುರೋಪ್ ದೇಶಗಳಾದ ಸ್ಪೈನ್, ಜರ್ಮನಿ, ಫ್ರಾನ್ಸ್ ನಲ್ಲಿಯೂ ಪರಿಸ್ಥಿತಿ ಗಂಭೀರವಾಗಿದೆ. ಇಟಲಿಯಲ್ಲಿ ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದ್ದು. ಫೆಬ್ರವರಿ 29 ನಂತರದ ಮೃತರ ಸಂಖ್ಯೆ ಈ ಕೆಳಗಿನಂತಿದೆ-

ಫೆಬ್ರುವರಿ 29- 8 ಸಾವು

ಮಾರ್ಚ್2- 11 ಸಾವು.

ಮಾರ್ಚ್ 4- 28 ಸಾವು

ಮಾರ್ಚ್ 6- 49 ಸಾವು

ಮಾರ್ಚ್ 8- 113 ಸಾವು.

ಮಾರ್ಚ್ 10- 168 ಸಾವು

ಮಾರ್ಚ್ 12- 189 ಸಾವು

ಮಾರ್ಚ್13- 250 ಸಾವು

ಮಾರ್ಚ್ 14- 175 ಸಾವು

ಮಾರ್ಚ್ 15- 368 ಸಾವು

ಒಟ್ಟು ಇಟಲಿಯಲ್ಲಿ 24,747 ಮಂದಿಗೆ ಕೊರೊನಾ ದೃಢಗೊಂಡಿದೆ.

ಸ್ಪೈನಿನ ಸ್ಥಿತಿಯೂ ಗಂಭೀರವಾಗಿದೆ. 7845 ಪ್ರಕರಣಗಳು ಸ್ಪೈನ್‍ನಲ್ಲಿ ದೃಢೀಕರಣವಾಗಿದ್ದು 292 ಮಂದಿ ಮೃತಪಟ್ಟಿದ್ದಾರೆ. 96 ಮಂದಿ ನಿನ್ನೆ ಮೃತಪಟ್ಟಿದ್ದಾರೆ. ಜರ್ಮನಿಯಲ್ಲಿ 5813 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದ್ದು ಹದಿಮೂರು ಮಂದಿ ಮೃತಪಟ್ಟಿದಾರೆ. 127 ಮಂದಿ ಮಾರ್ಚ್‍ನಲ್ಲಿ ಫ್ರಾನ್ಸಿನಲ್ಲಿ ಕೊರೊನಾದಿಂದ ಬಳಲಿ ಮೃತಪಟ್ಟಿದ್ದರು. ಅಲ್ಲೀಗ 5423 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಸ್ವಿಟ್ಝರ್‍ಲೆಂಡ್, ನೊರ್ವೆ, ನೆದರ್‍ಲೆಂಡ್ಸ್, ಸ್ವೀಡನ್, ಬೆಲ್ಜಿಯಂ, ಡೆನ್ಮಾರ್ಕ್, ಆಸ್ಟ್ರೀಯ ಮೊದಲಾದ ದೇಶಗಳಲ್ಲಿ ಹೆಚ್ಚು ಮಂದಿಗೆ ಕೊರೊನಾ ಹರಡಿದೆ.

ಅಮೆರಿಕದಲ್ಲಿ 102 ಮಂದಿಗೆ ಹೊಸದಾಗಿ ರೋಗ ತಗಲಿರುವುದು ದೃಢಪಟ್ಟಿದೆ. ಇದರೊಂದಿಗೆ ಅಮೆರಿಕದಲ್ಲಿ ಕೊರೊನಾ ಇರುವವರ ಸಂಖ್ಯೆ 3782ಕ್ಕೇರಿಕೆಯಾಯಿತು. ಅಮೆರಿಕದಲ್ಲಿ 69 ಮಂದಿ ಮೃತಪಟ್ಟಿದ್ದಾರೆ.