ಭಾರತದ ಬಂದರುಗಳಲ್ಲಿ ಸಿಲುಕಿದ 25,504 ಮಂದಿ

0
1157

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ. 16: ಕೊರೊನಾ ಹರಡುತ್ತಿರುವುದರಿಂದ ಸುರಕ್ಷಾ ಮುನ್ನೆಚ್ಚರಿಕೆಯಾಗಿ ಭಾರತದ ಬಂದರುಗಳಲ್ಲಿ ಹಡಗಿಗೆ ನಿಷೇಧವಿದ್ದು 25 ಸಾವಿರಕ್ಕೂ ಹೆಚ್ಚು ಮಂದಿ ದಡಕ್ಕೆ ಬರಲಾಗದೆ ಹಡಗಿನೊಳಗೆ ಇದ್ದಾರೆ. 700 ಹಡಗುಗಳು ಲಂಗರು ಹಾಕಿ ಅನುಮತಿಗೆ ಕಾಯುತ್ತಿವೆ. ಶಿಪ್ಪಿಂಗ್ ಸಚಿವಾಲಯ ಅಧಿಕೃತವಾಗಿ ಈ ವಿಷಯವನ್ನು ತಿಳಿಸಿದೆ. ಭಾರತದ ಬಂದರುಗಳಿಗೆ ವಿದೇಶಿ ಹಡಗುಗಳಿಗೆ ಮಾರ್ಚ್ 31ರವರೆಗೆ ನಿಷೇಧವನ್ನು ಕಳೆದ ವಾರ ಹೇರಲಾಗಿತ್ತು. ಕೊರೊನಾ ಪೀಡಿತ ದೇಶಗಳಿಂದಿರುವವರು ಹಡಗುಗಳಲ್ಲಿದ್ದಾರೆ.

ಮಾರ್ಚ್ 31ರವರೆಗೆ ಅಧಿಕೃತ ಲೆಕ್ಕದ ಪ್ರಕಾರ 703 ಹಡಗುಗಳಲ್ಲಿ 25,504 ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ. ಹಡಗಿನ ಸಿಬ್ಬಂದಿ ಪ್ರಯಾಣಿಕರ ಲೆಕ್ಕವಿದು. ಭಾರತದಲ್ಲಿ ಹನ್ನೆರಡು ಪ್ರಧಾನ ಬಂದರುಗಳಿಗೆ ನಿಷೇಧ ಹೇರಲಾಗಿದ್ದು, ಇದರಲ್ಲಿ ಇನ್ನೂರರಷ್ಟು ಸಣ್ಣ ಬಂದರುಗಳು ಒಳಗೊಂಡಿವೆ.