ಕೊರೊನಾ: ಸಂಬಳ ಕಡಿತ ಮಾಡುವ ಕಂಪೆನಿಗಳು ಕಾರಣ ತೋರಿಸಬೇಕು- ಒಮನ್

0
678

ಸನ್ಮಾರ್ಗ ವಾರ್ತೆ

ಮಸ್ಕತ್, ಎ. 17: ಕೊರೊನಾದಿಂದ ಕೆಲಸಗಾರರ ಸಂಬಳ ಕಡಿತ ಮಾಡುವ ಖಾಸಗಿ ಕಂಪೆನಿಗಳು ಅದಕ್ಕೆ ಸಾಕಷ್ಟು ಸಾಕ್ಷ್ಯಗಳನ್ನು ಹಾಜರುಪಡಿಸಬೇಕಾಗಿದೆ ಎಂದು ಒಮನ್ ನ ಮಾನವ ಕಲ್ಯಾಣ ಸಚಿವ ಶೇಖ್ ಅಬ್ದುಲ್ಲ ಅಲ್ ಬಕ್ರಿ ಹೇಳಿದ್ದಾರೆ. ಕೊರೊನಾ ಕಂಪೆನಿಯ ಚಟುವಟಿಕೆಗಳನ್ನು ಹೇಗೆ ಬಾಧಿಸಿದೆ ಎಂಬುದಕ್ಕೆ ಸಾಕ್ಷ್ಯ ಕೊಡಬೇಕು. ನಂತರ ಸುಪ್ರೀಂ ಕಮಿಟಿ ಅನುಮತಿ ನೀಡಿದ ಸಂಬಳ ಕಡಿತ ಸಹಿತ ಕ್ರಮಗಳು ಜಾರಿಗೊಳಿಸಲು ಅನುಮತಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಸಚಿವರು ಹೇಳಿದರು.

ಸಂಕಷ್ಟದಲ್ಲಿ ಬಿದ್ದ ಕಂಪೆನಿಗಳು ತಮ್ಮ ಕಾರ್ಮಿಕರೊಂದಿಗೆ ಸಹಮತದಲ್ಲಿ ಕೆಲಸದ ಸಮಯ ಕಡಿತಕ್ಕೆ ತಕ್ಕಂತೆ ಅನುಪಾತದಡಿಯಲ್ಲಿ ಸಂಬಳ ಕಡಿಮೆ ಮಾಡುವುದು ಮತ್ತು ವಿದೇಶಿ ಕಾರ್ಮಿಕರ ಉದ್ಯೋಗ ಒಪ್ಪಂದ ಕೊನೆಗೊಳಿಸುವುದಕ್ಕೂ ಮುಂಚೆ ಸಾಧ್ಯವಿರುವ ಎಲ್ಲ ಪರಿಹಾರ ಮಾರ್ಗೋಪಾಯಗಳನ್ನು ಹುಡುಕಬೇಕಾಗಿದೆ ಎಂದು ಸಚಿವರು ಹೇಳಿದರು. ಕಾರ್ಮಿಕರೊಂದಿಗೆ ಚರ್ಚಿಸಿಯೇ ಸಂಬಳ ಕಡಿಮೆ ಮಾಡಬಹುಡಾಗಿದೆ. ಸುಪ್ರೀಂ ಕಮಿಟಿಯ ತೀರ್ಮಾನ ಆಗುವ ಮೊದಲೇ ವೇತನ ಕಡಿಮೆ ಮಾಡಿದ ಕಂಪೆನಿಗಳು ಕಡಿಮೆ ಮಾಡಿದಷ್ಟು ವೇತನವನ್ನು ಕಾರ್ಮಿಕರಿಗೆ ಕೊಡಬೇಕು. ಈ ವಿಷಯದಲ್ಲಿ 26 ಕಂಪೆನಿಗಳು ಒಪ್ಪಿಕೊಂಡಿವೆ. ಹದಿನೈದು ಕಂಪೆನಿಗಳೊಂದಿಗೆ ಚರ್ಚೆ ನಡೆಯುತ್ತಿದೆ. ಸ್ವದೇಶಿ ಕಾರ್ಮಿಕರ ಹಕ್ಕುಗಳನ್ನು ಎಲ್ಲ ಕಂಪೆನಿಗಳು ಸಂರಕ್ಷಿಸಬೇಕೆಂದು ಮಾನವ ಕಲ್ಯಾಣ ಸಚಿವರು ತಿಳಿಸಿದರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.