ಸನ್ಮಾರ್ಗ ವಾರ್ತೆ
ಪುಣೆ, ಎ. 28: ಬ್ರಿಟನ್ ನ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯ ಅಭಿವೃದ್ಧಿಗೊಳಿಸಿರುವ ಕೊರೊನ ವ್ಯಾಕ್ಸಿನ್‍ಗಳು ಭಾರತದ ಮಾರುಕಟ್ಟೆಗೆ ಅಕ್ಟೋಬರ್ ಗೆ ತಲುಪುವ ಸಾಧ್ಯತೆ ಇದೆ ಎಂದು ಜಗತ್ತಿನ ಅತೀ ದೊಡ್ಡ ವ್ಯಾಕ್ಸಿನ್ ನಿರ್ಮಾತೃಗಳಾದ ಪುಣೆಯ ಸೀರಮ್ ಇನ್ಸಿಟ್ಯೂಟ್ ತಿಳಿಸಿದೆ. ಕಳೆದ ತಿಂಗಳು 23 ತಾರೀಕಿಗೆ ಮನುಷ್ಯರಲ್ಲಿ ಪರೀಕ್ಷೆ ಆರಂಭಿಸಿತ್ತು. ಸೆಪ್ಟಂಬರಿನಲ್ಲಿ ಕೊನೆಗೊಳ್ಳಲಿದೆ. ಇದಕ್ಕಿಂತ ಮುಂಚೆ ಮೂರು ವಾರದೊಳಗೆ ವ್ಯಾಕ್ಸಿನ್ ನಿರ್ಮಾಣ ತೊಡಗಿ ಪರೀಕ್ಷೆ ಯಶಸ್ವಿಯಾದರೊಡನೆ ಅಗತ್ಯವಿರುವ ಡೋಸ್ ಅನ್ನು ಲಭ್ಯಗೊಳಿಸುವ ಯೋಜನೆ ಸೀರಂಗೆ ಇದೆ.
ಒಂದು ಡೋಸ್‍ಗೆ 1000 ರೂಪಾಯಿ ಇದೆ. ಪ್ರತೀ ತಿಂಗಳು 50 ಲಕ್ಷ ಡೋಸ್ ಗಳನ್ನು ಆರು ತಿಂಗಳು ಉತ್ಪಾದಿಸಲಾಗುವುದು. ಭಾರತದಲ್ಲಿ ವ್ಯಾಕ್ಸಿನ್‍ನ ಕ್ಲಿನಿಕಲ್ ಟ್ರಯಲ್ ಮೇ ತಿಂಗಳಲ್ಲಿ ಆರಂಭವಾಗುತ್ತಿದೆ. ಕೊರೊನಾ ವ್ಯಾಕ್ಸಿನ್ ಮೇಲೆ ಪೇಟೆಂಟ್ ಪಡೆಯುವುದಿಲ್ಲ ಮತ್ತು ದೇಶದ ಹೊರಗೆ ಎಲ್ಲರಿಗೂ ಉತ್ಪಾದಿಸಿ ಮಾರಲು ಅನುಮತಿ ಕೊಡುತ್ತೇವೆ ಎಂದು ಸೀರಮ್ ಇನ್ಸಿಟಿಟ್ಯೂಟ್ ಸಿಇಒ ಆದರ್ ಪೂನವಾಲ ತಿಳಿಸಿದರು. ಏಳು ಜಾಗತಿಕ ಇನ್ಸಿಟಿಟ್ಯೂಟ್‍ಗಳ ಜೊತೆಗೆ ಸೀರಂ ಇನ್ಸಿಟಿಟ್ಯೂಟ್ ಕೂಡ ಆಕ್ಸ್ ಫರ್ಡ್ ವ್ಯಾಕ್ಸಿನ್ ನಿರ್ಮಾಣದಲ್ಲಿ ಪಾಲ್ಗೊಂಡಿದೆ. ಮಲೇರಿಯ ವ್ಯಾಕ್ಸಿನ್ ಯೋಜನೆಯಲ್ಲಿ ಆಕ್ಸ್‍ಫರ್ಡಿನ ವಿಜ್ಞಾನಿಗಳು ಸೀರಂ ಇನ್ಸಿಟಿಟ್ಯೂಟ್‍ನೊಂದಿಗೆ ಸಹಕರಿಸುತ್ತಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












