ಕೊರೊನ ವೈರಸ್ಸನ್ನೇ ಗೆದ್ದ ಚೀನ: ವುಹಾನ್‍ನಲ್ಲಿ ಜನಜೀವನ ಸಾಮಾನ್ಯ ಸ್ಥಿತಿಗೆ- ವಿಶ್ವಕ್ಕೆ ಭರವಸೆ ತುಂಬಿದ ವಿದ್ಯಮಾನ

0
1191

ಸನ್ಮಾರ್ಗ ವಾರ್ತೆ

ಬೀಜಿಂಗ್, ಎ. 8: ಚೀನದ ಹುಬೆ ಪ್ರಾಂತ ಕೊರೊನಾವನ್ನು ಸೋಲಿಸಿದೆ. 76 ದಿನಗಳ ಲಾಕ್ ಡೌನ್‍ನ ನಂತರ ಹುಬೆ ಪ್ರಾಂತದ ರಾಜಧಾನಿ ವುಹಾನ್‍ನಲ್ಲಿ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಿದೆ. ಇಂದಿನಿಂದ ಇಲ್ಲಿ ಹೇರಲಾಗಿದ್ದ ನಿಯಂತ್ರಣಗಳನ್ನು ಹಿಂಪಡೆಯುವುದಾಗಿ ಚೀನ ಸರಕಾರ ತಿಳಿಸಿದೆ. ರೈಲು, ವಿಮಾನ, ರಸ್ತೆ ಸಾರಿಗೆ ಇಂದಿನಿಂದ ಪುನರಾರಂಭವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು. 55,000 ಪ್ರಯಾಣಿಕರು ಬರುವ ಸಾಧ್ಯತೆ ಇದೆ ಎಂದು ವುಹಾನ್ ರೈಲ್ವೆ ಹೇಳಿಕೊಂಡಿತು. ನಿಯಂತ್ರಣ ಹಿಂಪಡೆದ ಹಿನ್ನೆಲೆಯಲ್ಲಿ ಕೊರೊನಾ ವಿರುದ್ಧ ನಿರ್ಣಾಯಕ ಗೆಲುವು ಚೀನ ದಕ್ಕಿಸಿಕೊಂಡಂತಾಗಿದೆ ಎಂದು ವರದಿಗಳು ತಿಳಿಸಿವೆ. ಇದೇ ವೇಳೆ ಅಮೆರಿಕದಲ್ಲಿ ಕೊರೊನಾ ಹಬ್ಬುವಿಕೆ ನಿಯಂತ್ರಣಾಧೀನವಾಗಿಲ್ಲ.

ವುಹಾನ್‍ನ ಆರ್ಥಿಕ, ಸಾಮಾಜಿಕ ಚಟುವಟಿಕೆಗಳು ಕಳೆದ 76 ದಿನಗಳಲ್ಲಿ ಅಕ್ಷರಶಃ ಸ್ಥಗಿತವಾಗಿತ್ತು. ಈಗ ಅದಕ್ಕೆ ಮರುಚಾಲನೆ ಸಿಕ್ಕಿದಂತಾಗಿದ್ದು ಅಂಟು ರೋಗ ನಿಯಂತ್ರಿಸುವ ಅಧಿಕಾರಿ ಲುವೊ ಪಿಂಗ್ ಸ್ಪಷ್ಟಪಡಿಸಿದ್ದಾರೆ. ಆದರೆ ಕಟ್ಟುನಿಟ್ಟಿನ ಮುನ್ನೆಚ್ಚರ ವಹಿಸುವ ಅಗತ್ಯವಿದೆ. ಪುನಃ ರೋಗ ಹರಡುವ ಸಾಧ್ಯತೆಯೂ ಇದೆ ಎಂದು ಅವರು ಹೇಳಿದರು. ಕೆಲಸ, ಉತ್ಪಾದನಾ ಚಟುವಟಿಕೆ ವುಹಾನ್‍ನಲ್ಲಿ ಪುನಃ ಆರಂಭಗೊಂಡ ವೇಳೆ ರೋಗ ಹರಡುವ ಸಾಧ್ಯತೆಯೂ ಇದೆ. ಆದ್ದರಿಂದ ನಿಯಂತ್ರಣ ತೆರವುಗೊಳಿಸಿದ್ದೇವೆಂದು ಎಲ್ಲವೂ ಸರಿಯಾಯಿತು ಎಂದು ಜನರು ಭಾವಿಸಬೇಡಿ ಎಂದು ಚೀನದ ಅಧಿಕಾರಿಗಳು ಜೊತೆಜೊತೆಗೆ ಮುನ್ನೆಚ್ಚರಿಕೆಯನ್ನೂ ನೀಡಿದ್ದಾರೆ. ಡಿಸೆಂಬರ್ ನಿಂದ ಹರಡಲಾಂಭಿಸಿದ ಕೊರೊನಾ ವೈರಸ್ ಚೀನದಲ್ಲಿ ಸಂಹಾರ ಕೃತ್ಯವೆಸಗಿತು. ವುಹಾನೊಂದರಲ್ಲೇ 2500 ಮಂದಿ ರೋಗಕ್ಕೆ ಜೀವಕಳಕೊಂಡಿದ್ದಾರೆ. 50,000 ಮಂದಿಗೆ ರೋಗದೃಢಪಟ್ಟಿತ್ತು. ಚೀನದಲ್ಲಿ ಕೊರನಾದಿಂದಾದ ಸಾವುಗಳಲ್ಲಿ ಶೇ.77ರಷ್ಟು ವುಹಾನ್‍ನಲ್ಲಿಯೇ ಸಂಭವಿಸಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.