ಕೊರೊನಾ ಇನ್ನೂ ಹೆಚ್ಚು ಸಮಯ ನಮ್ಮ ಜೊತೆ ಇರಲಿದೆ- ವಿಶ್ವಾರೋಗ್ಯ ಸಂಘಟನೆ

0
656

ಸನ್ಮಾರ್ಗ ವಾರ್ತೆ

ಜನೀವ, ಎ. 24: ಕೊರೊನಾ ಸಮಸ್ಯೆ ಶೀಘ್ರದಲ್ಲಿ ಸಮಾಪನಗೊಳ್ಳದು ಎಂದು ವಿಶ್ವ ಆರೋಗ್ಯ.ಸಂಘಟನೆ ಮುನ್ನೆಚ್ಚರಿಕೆ ನೀಡಿದೆ. ಅಮೆರಿಕದ ಜಾನ್ಸ್ ಹಾಪ್‍ಕಿನ್ಸ್ ವಿಶ್ವ ವಿದ್ಯಾನಿಲಯ ಹೊರಬಿಟ್ಟಿರುವ ಲೆಕ್ಕದಂತೆ ಕೊರನಾದಿಂದ 1,83,027 ಮಂದಿ ಕೊರನಾ ಬಾಧಿಸಿ ಮೃತಪಟ್ಟಿದ್ದಾರೆ. ಹಲವು ದೇಶಗಳಲ್ಲಿ ಕೊರೊನಾ ಹೋರಾಟ ಆರಂಭ ಘಟ್ಟದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಘಟನೆ ತಿಳಿಸಿದೆ.

ಪ್ರಮಾದ ಮಾಡಿಕೊಳ್ಳಬೇಡಿರಿ. ನಮಗೆ ಹೋಗಲು ಬಹಳ ದೂರ ಇದೆ. ಬಹಳಷ್ಟು ಕಾಲ ಕೊರೊನಾ ವೈರಸ್ ನಮ್ಮ ಜೊತೆ ಇರಲಿದೆ. ಮನೆಯಲ್ಲಿ ಕುಳಿತುಕೊಳ್ಳಲು ಹೇಳಿದ್ದು, ದೈಹಿಕವಾಗಿ ದೂರ ಇರುವ ಸೂಚನೆ ಮತ್ತು ಇತ್ಯಾದಿ ಕ್ರಮಗಳನ್ನು ಆಸ್ಥೆಯಿಂದ ಪಾಲಿಸಿ ಎಂದು ವಿಶ್ವ ಆರೋಗ್ಯ ಸಂಘಟನೆಯ ಮುಖ್ಯಸ್ಥ ಟೆಡ್ರೊಸ್ ಅದೊನಾಂ ಗೆಬ್ರಿಯೋಸಿಸ್ ಹೇಳಿದರು. ಹಲವು ದೇಶಗಳು ಮಹಾಮಾರಿಯ ಪ್ರಾರಂಭ ಘಟ್ಟದಲ್ಲಿವೆ. ಕೊರೊನಾ ಮೊದಲು ಕಂಡು ಬಂದಲ್ಲಿ ಇಂತಹ ಹಲವು ದೇಶಗಳಲ್ಲಿ ರೋಗಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.