ಸನ್ಮಾರ್ಗ ವಾರ್ತೆ
ವಾಷಿಂಗ್ಟನ್, ಎ. 23: ಲಾಕ್ ಡೌನ್ ನಿಂದಾಗಿ ಭಾರತದಲ್ಲಿ ನಾಲ್ಕು ಕೋಟಿ ವಲಸೆ ಕಾರ್ಮಿಕರು ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ವಿಶ್ವಬ್ಯಾಂಕ್ ವರದಿ ಮಾಡಿದೆ. ದೇಶದಲ್ಲಿ ಒಂದು ತಿಂಗಳಿನಿಂದ ಲಾಕ್‍ಡೌನ್ ಇದೆ. ವಲಸೆ ಕಾರ್ಮಿಕರಿಗೆ ಆಹಾರಕ್ಕೂ ಕಷ್ಟದ ಪರಿಸ್ಥಿತಿ ಬಂದೊದಗಿದೆ ಎಂದು ಅದು ತಿಳಿಸಿದೆ. ಅಂತಾರಾಷ್ಟ್ರೀಯ ವಲಸೆಗಾರರಿಗಿಂತ ದುಪ್ಪಟ್ಟಿಗಿಂತಲೂ ಹೆಚ್ಚು ಇದು. ಕೆಲಸ ಇಲ್ಲ. ಮನೆಗೆ ಹೋಗಲೂ ಆಗಿಲ್ಲ. ಇದರಿಂದಾಗಿ ವಲಸೆ ಕಾರ್ಮಿಕರು ಕಷ್ಟ ಅನುಭವಿಸುತ್ತಿದ್ದಾರೆ. ಲಾಕ್ ಡೌನ್, ಕೆಲಸ ಇಲ್ಲ, ಸಾಮಾಜಿಕ ಅಂತರ ಪಾಲಿಸುವುದು ಭಾರತದಲ್ಲಿ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ದೇಶದೊಳಗಿನ ವಲಸೆ ಕಾರ್ಮಿಕರಿಗೆ ಅವರ ಹುಟ್ಟೂರಿಗೆ ಹೋಗಲು ಪ್ರೇರೇಪಿಸಿದೆ. 60,000ದಷ್ಟು ವಲಸೆ ಕಾರ್ಮಿಕರು ನಗರಗಳಿಂದ ತಮ್ಮೂರಿಗೆ ಕಷ್ಟದಿಂದ ಪಲಾಯನ ಮಾಡಿದರೆಂದು ಬುಧವಾರ ಹೊರಡಿಸಿದ ವರದಿಯಲ್ಲಿ ಬೆಟ್ಟು ಮಾಡಲಾಗಿದೆ.
ಈ ಪಲಾಯನ ಕೂಡ ಕೊರೊನಾ ವ್ಯಾಪಿಸುವುದಕ್ಕೆ ಕಾರಣವಾಗಬಹುದು. ದೇಶದೊಳಗಿನ ವಲಸೆಗಾರರಿಗೆ ಆರೋಗ್ಯಸೇವೆಗಳ, ಹಣ ಕಳುಹಿಸುವ ಸೌಕರ್ಯ, ಸಾಮಾಜಿಕ ಸುರಕ್ಷಿತತೆ ಖಚಿತಪಡಿಸಿದರೆ ಮಾತ್ರ ಸವಾಲುಗಳನ್ನು ಮೀರಿ ನಿಲ್ಲಲು ಸಾಧ್ಯ ಎಂದು ವರದಿ ತಿಳಿಸಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












