ಕೊರೋನ ವ್ಯಾಕ್ಸಿನ್ ಸಿದ್ಧತೆಗಳ ಕುರಿತು ತಿಳಿಯಲು ಹೈದರಾಬಾದ್ ತಲುಪಿದ 61 ದೇಶಗಳ ರಾಜತಾಂತ್ರಿಕರು

0
480

ಸನ್ಮಾರ್ಗ ವಾರ್ತೆ

ಹೈದರಾಬಾದ್:ಕೊರೋನ ಲಸಿಕೆಯ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು 64 ದೇಶಗಳ ರಾಜತಾಂತ್ರಿಕರು ಇಂದು ಹೈದರಾಬಾದ್ ತಲುಪಿದ್ದಾರೆ. ಅವರು ಭಾರತ್ ಬಯೋಟೆಕ್ (Bharat Biotech) ಮತ್ತು ಬಯೋಲೊಜಿಕಲ್ ಇ ಲಿಮಿಟೆಡ್‌ಗೆ(Biological E Limited) ಭೇಟಿ ನೀಡಲಿದ್ದಾರೆ. ಈ ಪ್ರವಾಸವನ್ನು ಈ ಹಿಂದೆ ಡಿಸೆಂಬರ್ 4 ರಂದು ನಡೆಸಲು ನಿರ್ಧರಿಸಲಾಗಿತ್ತು, ಆದರೆ ನಂತರ ಅದನ್ನು ಮುಂದೂಡಲಾಗಿತ್ತು.

ದೇಶದಲ್ಲಿ ಮಂಗಳವಾರ 32,061 ಹೊಸ ಪ್ರಕರಣಗಳು ದಾಖಲಾಗಿವೆ. ಸತತ 10ನೇ ದಿನದಲ್ಲಿ 40 ಸಾವಿರಕ್ಕಿಂತ ಕಡಿಮೆ ರೋಗಿಗಳು ಕಂಡು ಬಂದಿದ್ದು, 36,537 ರೋಗಿಗಳು ಗುಣಮುಖರಾಗಿದ್ದಾರೆ. ಹಾಗೂ 402 ಸೋಂಕಿತರು ಸಾವನ್ನಪ್ಪಿದ್ದಾರೆ. ಇದರೊಂದಿಗೆ, ಸಕ್ರಿಯ ಪ್ರಕರಣಗಳ ಸಂಖ್ಯೆಯು 4899 ರಷ್ಟು ಕಡಿಮೆಯಾಗಿದೆ. ಕಳೆದ 10 ದಿನಗಳಲ್ಲಿ 75,654 ಸಕ್ರಿಯ ಪ್ರಕರಣಗಳನ್ನು ಕಡಿಮೆ ಮಾಡಲಾಗಿದೆ.

ದೇಶದಲ್ಲಿ ಈವರೆಗೆ ಒಟ್ಟು 97.35 ಲಕ್ಷ ಪ್ರಕರಣಗಳು ವರದಿಯಾಗಿದ್ದು, 92.14 ಲಕ್ಷ ರೋಗಿಗಳು ಗುಣಮುಖರಾಗಿದ್ದರೆ, 1.41 ಲಕ್ಷ ರೋಗಿಗಳು ಸಾವನ್ನಪ್ಪಿದ್ದಾರೆ. ಈಗ ಒಟ್ಟು 3.77 ಲಕ್ಷ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಂಕಿಅಂಶಗಳನ್ನು covid19india.org ನಿಂದ ತೆಗೆದುಕೊಳ್ಳಲಾಗಿದೆ.