ಪತಂಜಲಿಯ ಕೊರೊನಿಲ್ ಕೆಮ್ಮು, ಜ್ವರದ ಮದ್ದು

0
460

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.25: ಕೊರೋನಕ್ಕೆ ಆಯುರ್ವೇದ ಮದ್ದು ಕಂಡು ಹಿಡಿದಿದ್ದೇವೆ ಎಂಬ ಪತಂಜಲಿಯ ಹಕ್ಕುವಾದ ಟುಸ್ಸಾಗಿದೆ. ರೋಗಪ್ರತಿರೋಧಕ ಶಕ್ತಿ ಹೆಚ್ಚಿಸುವ, ಕೆಮ್ಮು ಜ್ವರಕ್ಕೆ ಚಿಕಿತ್ಸಿಸುವುದಕ್ಕೆ ಅಂಗೀಕಾರ ಸಿಕ್ಕ ಮದ್ದನ್ನು ಕೊರೋನ ಚಿಕಿತ್ಸೆಗೆ ಮದ್ದಾಗಿ ಪತಂಜಲಿ ಹೇಳುತ್ತಿದೆ ಎಂದು ಆಯುಷ್ ಮಂತ್ರಾಲಯದ ಅಧೀನದ ಉತ್ತರಾಖಂಡದ ಸ್ಟೇಟ್ ಲೈಸನ್ಸಿಂಗ್ ಅಥಾರಿಟಿ ಹೇಳಿದೆ.

ಕೊರೊನಿಲ್ ಸ್ವಾಸರಿ ಕೊರೋನ ಚಿಕಿತ್ಸೆಗೆ ಉಪಯೋಗಿಸುವ ಯತ್ನದ ವಿರುದ್ದ ಸ್ಟೇಟ್ ಲೈಸನ್ಸಿಂಗ್ ಅಥಾರಿಟಿ ಹರಿದ್ವಾರದ ಪತಂಜಲಿಗೆ ಪತ್ರ ಬರೆದಿದೆ.

ನಾವು ಪತಂಜಲಿಗೆ ಪತ್ರ ಬರೆದಿದ್ದೇವೆ. ರೋಗ ಪ್ರತಿರೋಧಕ ಸಾಮರ್ಥ್ಯ ಹೆಚ್ಚಿಸಲು ಜ್ವರ ಕೆಮ್ಮಿಗಿರುವ ಮದ್ದಿದು. ಕೊರೋನ ಚಿಕಿತ್ಸೆಗೆ ಅನುಮತಿ ಕೊಟ್ಟಿಲ್ಲ. ಎಂದು ಎಸ್‌ಎಲ್‌ಎ ಜಂಟಿ ನಿರ್ದೇಶಕ ಡಾ.ವೈಎಸ್.ರಾವತ್ ಹೇಳಿದರು. ಸರಕಾರದ ನಿಬಂಧನೆಯಂತೆ ಎಲ್ಲ ವಿಷಯವನ್ನು ಮಾಡಿದ್ದೇವೆ ಎಂದು ಪತಂಜಲಿ ವಕ್ತಾರ ಎಸ್‍ಕೆ ತಿಜರ್ವಾಲ್ ಹೇಳಿದರು. ಜಗತ್ತಿನಲ್ಲಿ ಹಲವರ ಸಾವಿಗೆ ಕಾರಣವಾದ ಕೊರೋನ ಮಹಾಮಾರಿಗೆ ವ್ಯಾಕ್ಸಿನ್ ಕಂಡು ಹುಡುಕುವುದರಲ್ಲಿ ಜಗತ್ತಿನ ಹಲವು ದೇಶಗಳು ವ್ಯಸ್ತವಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.