ಸನ್ಮಾರ್ಗ ವಾರ್ತೆ
ಸ್ಟಾನ್ಫಿ(ನ್ಯೂಮೆಕ್ಸಿಕೊ),ಜೂ.25: ಅಮೆರಿಕದ ನ್ಯೂಮೆಕ್ಸಿಕೊ ರಾಜ್ಯದ ಸ್ಟಾನ್ಫಿ ಸಿಟಿಯಲ್ಲಿ ಭಾರತದ ರೆಸ್ಟೊರೆಂಟ್ ಮೇಲೆ ದುಷ್ಕರ್ಮಿಗಳಿಂದ ದಾಳಿಯಾಗಿದೆ. ಅಡಿಗೆ ಕೋಣೆಯ ಪೀಠೋಪಕರಣಗಳನ್ನು ದುಷ್ಕರ್ಮಿಗಳು ಪುಡಿಗುಟ್ಟಿ ಜನಾಂಗೀಯವಾದಿ ಘೋಷಣೆಗಳನ್ನು ಪೆಯಿಂಟ್ನಿಂದ ಬರೆದಿದ್ದಾರೆ. ನ್ಯೂಮೆಕ್ಸಿಕೊದಲ್ಲಿ ಬಹಳ ಹಿಂದಿನಿಂದಲೂ ಇಂಡಿಯಾ ಪ್ಯಾಲೆಸ್ ರೆಸ್ಟೋರೆಂಟ್ ಇದೆ. ಈಗ ಇದರಲ್ಲಿ ಜನಾಂಗೀಯವಾದಿಗಳು ದಾಂಧಲೆಯೆಬ್ಬಿಸಿದ್ದು, ನಾಶಪಡಿಸಿದರು.
ನಿಮ್ಮ ದೇಶಕ್ಕೆ ಮರಳಿರಿ ಎಂದು ಗೋಡೆಗಳ ಮೇಲೆ ಬರೆಯಲಾಗಿದೆ. ಸ್ಟಾನ್ಫಿ ಮೇಯರ್ ಅಲ್ ವೆಂಬರ್ ಭಾರತದ ರೆಸ್ಟೋರೆಂಟ್ ಮೇಲಾದ ದಾಳಿಯನ್ನು ಖಂಡಿಸಿದರು. ದಾಳಿಯಿಂದ ಸ್ಥಳೀಯ ಸಮುದಾಯ ಮತ್ತು ಇಂಡಿಯನ್ ಅಮೆರಿಕನ್ ವಂಶೀಯರಲ್ಲಿ ಭಯ ಮನೆ ಮಾಡಿದೆ ಎಂದು ವರದಿ ತಿಳಿಸಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












