ಸಂಪೂರ್ಣ VVPAT ಸ್ಲಿಪ್‌ಗಳ ಎಣಿಕೆ; ವಿಚಾರಣೆ ಎರಡು ವಾರ ಮುಂದೂಡಿದ ಕೋರ್ಟ್

0
195

ಸನ್ಮಾರ್ಗ ವಾರ್ತೆ

ನವದೆಹಲಿ: ಮತ ಯಂತ್ರದಲ್ಲಿ ಚಲಾವಣೆಯಾದ ಮತಗಳನ್ನು ಪರಿಶೀಲಿಸಲು ಸಂಪೂರ್ಣ ವಿವಿಪ್ಯಾಟ್ ಸ್ಲಿಪ್‌ಗಳನ್ನು ಎಣಿಕೆ ಮಾಡಬೇಕು ಎಂದು ಒತ್ತಾಯಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಬುಧವಾರ ಪರಿಗಣಿಸಲಿಲ್ಲ. ಪೀಠದ ಮುಖ್ಯಸ್ಥ ಜಸ್ಟಿಸ್ ಸಂಜಯ್ ಖನ್ನರನ್ನು ಇನ್ನೊಂದು ಪೀಠಕ್ಕೆ ಚೀಫ್ ಜಸ್ಟಿಸ್ ವರ್ಗಾಯಿಸಿದ್ದರಿಂದ ಪ್ರಕರಣ ವಿಚಾರಣೆ ಸಾಧ್ಯವಾಗಿಲ್ಲ.

ಸಾರ್ವತ್ರಿಕ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಅರ್ಜಿಗಳನ್ನು ತುರ್ತಾಗಿ ಪರಿಗಣಿಸುವಂತೆ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಹಿರಿಯ ವಕೀಲ ಕಪಿಲ್ ಸಿಬಲ್ ಕೇಳಿಕೊಂಡರು, ಆದರೆ ಎರಡು ವಾರಗಳ ನಂತರ ಅವುಗಳನ್ನು ಪರಿಗಣಿಸಬಹುದು ಎಂದು ಅವರು ಸ್ಪಷ್ಟಪಡಿಸಿದರು.

ಈ ಹಿಂದೆ ಅರ್ಜಿಯ ವಾದವನ್ನ ಆಲಿಸಿದ ಜಸ್ಟಿಸ್ ಖನ್ನಾ ಜಸ್ಟಿಸ್ ಬೇಲ ಎಂ ತ್ರಿವೇದಿ, ಜಸ್ಟಿಸ್ ಎಂಎ ಸುಂದರೇಶ್‍ರು ಇನ್ನೊಂದು ಪೀಠದಲ್ಲಿದ್ದಾಗ ಅಲ್ಲಿಗೆ ಬಂದು ಈ ಅರ್ಜಿಯ ಕುರಿತು ಹೇಳಿದಾಗ ಜಸ್ಟಿಸ್ ಖನ್ನಾ ಬುಧವಾರ ಈ ಅರ್ಜಿಯಲ್ಲಿ ವಿಚಾರಣೆ ನಡೆಸಬೇಕಿತ್ತು. ವಿಶೇಷ ಕೋರ್ಟು ಸೇರಿದ ಕಾರಣದಿಂದ ಅದನ್ನು ಪರಿಗಣಿಸಲು ಆಗಿಲ್ಲ ಎಂದು ಕಪಿಲ್ ಸಿಬಲ್ ನೆನಪಿಸಿದರು.

ಚುನಾವಣೆ ಸನ್ನಿಹಿತವಾಗಿರುವುದರಿಂದ ಮುಂದಿನ ಮಂಗಳವಾರವಾದರೂ ವಿಚಾರಣೆ ನಡೆಸಬೇಕು ಎಂದು ಸಿಬಲ್ ಆಗ್ರಹಿಸಿದರು. ಮುಂದಿನ ವಾರ ಪ್ರಕರಣದ ವಿಚಾರಣೆ ನಡೆಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಖನ್ನಾ ಉತ್ತರಿಸಿದರು. ಇದರಿಂದ ಸಮಸ್ಯೆಯಾಗಲಿದೆ ಎಂದು ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಗೋಪಾಲ್ ಶಂಕರನಾರಾ ಯಣನ್ ಪ್ರತಿಕ್ರಿಯಿಸಿದಾಗ, ರೋಸ್ಟರ್ ಪ್ರಕಾರ ಪ್ರಕರಣಗಳನ್ನು ಪಟ್ಟಿ ಮಾಡಲಾಗಿದ್ದು, ಎರಡು ವಾರಗಳಲ್ಲಿ ಅರ್ಜಿಗಳ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಖನ್ನಾ ಸ್ಪಷ್ಟಪಡಿಸಿದರು.