ಬಸ್‍ ನಿಲ್ದಾಣದಲ್ಲಿಯೇ ಮೃತದೇಹವನ್ನು ಬಿಟ್ಟು ಹೋದ ಆಸ್ಪತ್ರೆ ಸಿಬ್ಬಂದಿಗಳು- ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ ವರದಿ

0
947

ಸನ್ಮಾರ್ಗ ವಾರ್ತೆ

ಹಾವೇರಿ,ಜು.6: ಕೊರೋನ ಶಂಕೆಯಿಂದ ಹೆದರಿ ಹಾವೇರಿಯಲ್ಲಿ 45 ವರ್ಷದ ಯುವಕನ ಮೃತದೇಹವವನ್ನು ಬಂಡಲ್‍ನಂತೆ ಕಟ್ಟಿ ಮೂರು ಗಂಟೆಗಳವರೆ ಬಸ್‍ಸ್ಟ್ಯಾಂಡಿನಲ್ಲಿ ಬಿಟ್ಟು ಹೋದ ಘಟನೆ ನಡೆದಿದೆ.

ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ಮೇಲೆ ಹಾವೇರಿ ತಾಲೂಕು ಆಸ್ಪತ್ರೆಗೆ ಸಮೀಪದ ಬಸ್‍ ನಿಲ್ದಾಣದಲ್ಲಿ ಪಿಪಿಇ ಕಿಟ್ಟ್‌ನಲ್ಲಿ ಹೊದೆಯಲಾದ ಮೃತದೇಹ ಗಮನಕ್ಕೆ ಬಂದಿದೆ. ಆರೋಗ್ಯ ಕಾರ್ಯಕರ್ತರ ನಿರ್ಲಕ್ಷ್ಯವು ಈ ರೀತಿ ಬಹಿರಂಗಗೊಂಡಿದ್ದು, ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಒಂದುವಾರ ಜ್ವರಕ್ಕಾಗಿ ರಾಣಿಬೆನ್ನೂರಿನ ತಾಲೂಕು ಆಸ್ಪತ್ರೆಯಲ್ಲಿ ಈ ವ್ಯಕ್ತಿ ಚಿಕಿತ್ಸೆಗೆ ದಾಖಲಾಗಿದ್ದರು. ಜೂನ್ 28ಕ್ಕೆ ಈತನ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಫಲಿತಾಂಶ ಪಡೆಯಲು ಶನಿವಾರ ಬೆಳಗ್ಗೆ ಹನ್ನೊಂದು ಗಂಟೆ ಈತ ಬಂದರೂ ವರದಿ ಸಿಗಲಿಲ್ಲ. ಆಸ್ಪತ್ರೆಯ ಸಮೀಪದ ನಿಲ್ದಾಣದಲ್ಲಿ ಬಸ್ ಕಾಯುವಾಗ ಇವರು ಕುಸಿದು ಬಿದ್ದು ಮೃತಪಟ್ಟಿದ್ದರು. ಇದನ್ನು ಅರಿತು ಆಸ್ಪತ್ರೆಯ ಸಿಬ್ಬಂದಿಗಳು ಪಿಪಿಇ ಕಿಟ್‍ನಲ್ಲಿ ಮೃತದೇಹವನ್ನು ಹೊದ್ದು ಶವಾಗಾರಕ್ಕೆ ಸಾಗಿಸುವ ಬದಲು ಬಸ್‍ಸ್ಟಾಪ್‍ನಲ್ಲಿಯೇ ಬಿಟ್ಟು ಬಂದಿದ್ದರು.

ಕೊರೋನ ಪೀಡಿತನಾಗಿ ಮೃತಪಟ್ಟಿದ್ದಾರೆ ಎಂದು ಇವರು ಈ ರೀತಿ ಮಾಡಿದ್ದರು. ಮೂರು ಗಂಟೆಯ ಬಳಿಕ ಶವಸಂಸ್ಕಾರಕ್ಕೆ ಮೃತದೇಹವನ್ನು ಕೊಂಡು ಹೋಗಲು ಪುನಃ ಸಿಬ್ಬಂದಿಗಳು ಬಂದಾಗ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿಬಿಟ್ಟಿತ್ತು.

ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಾವೇರಿಯ ಡೆಪ್ಯುಟಿ ಕಮಿಶನರ್ ಎಸ್.ಯೋಗೀಶ್ವರ್ ತಿಳಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.