ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜು.6: ಝಾರ್ಖಂಡಿನ ಸ್ಥಳೀಯ ಬಿಜೆಪಿ ನಾಯಕನನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಪಾರ್ಲಿಮೆಂಟು ಚುನಾವಣೆಯಲ್ಲಿ ಅಭ್ಯರ್ಥಿಯಾಗಬಹುದೆಂದು ಹೇಳಲಾಗುತ್ತಿದ್ದ ನಾಯಕ ಜಯವರ್ಧನ್ ಸಿಂಗ್ ಹತ್ಯೆಗೀಡಾಗಿದ್ದಾರೆ. ಲತೆಹರ್ ಜಿಲ್ಲೆಯ ಬಾರವಾಹ್ದಿ ಪೊಲೀಸ್ ಠಾಣೆಯಲ್ಲಿ ಅವರ ಮೇಲೆ ಅಪರಿಚಿತರು ಗುಂಡು ಹಾರಿಸಿದ್ದಾರೆ.
ಊರವರು ಆರೋಪಿಗಳನ್ನು ಬೆಂಬತ್ತಿದರೂ ಆರೋಪಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೊರಳಿಗೆ ಗುಂಡು ತಗುಲಿದ್ದು ಸಿಂಗ್ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಲತೆಹರ್ ಪೊಲೀಸ್ ಸೂಪರಿಡೆಂಟ್ ಪ್ರಶಾಂತ್ ಆನಂದ್ ಹೇಳಿದರು.
ಸಿಂಗ್ ಕಾಂಟ್ರಾಕ್ಟರ್ ಆಗಿದ್ದು, ಅವರ ಮೇಲೆ ಸ್ಥಳೀಯ ಗೂಂಡಾ ತಂಡವು ಸಿಟ್ಟಾಗಿತ್ತೆಂದು ಹೇಳಲಾಗುತ್ತಿದ್ದು ತನಿಖೆ ಮುಂದುವರಿಯುತ್ತಿದೆ. ಸಿಂಗ್ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದು, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಬಿಗಡಾಯಿಸಿದೆ ಎಂದು ಸೋಮವಾರ ಅವರು ಡಿಜಿಪಿಯನ್ನು ಭೇಟಿಯಾಗುವುದಾಗಿ ತಿಳಿಸಿದ್ದರು.
ಕಳೆದ ದಿವಸ ಪಶ್ಚಿಮ ಬಂಗಾಳದಲ್ಲಿ ಇದಕ್ಕೆ ಸಮಾನ ಘಟನೆ ನಡೆದಿದ್ದು, 24 ಪರಗಣ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ ನಾಯಕನಿಗೆ ಗುಂಡು ಹಾರಿಸಲಾಗಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












