ಹೆಚ್ಚು ಕೊರೋನ ಸೋಂಕಿತ ರಾಜ್ಯಗಳ ಪಟ್ಟಿಯಲ್ಲಿ 6 ನೇ ಸ್ಥಾನಕ್ಕೇರಿದ ಕರ್ನಾಟಕ; ರಾಜ್ಯದಲ್ಲಿ 33,418 ಸೋಂಕು ಪ್ರಕರಣಗಳು

0
317

ಸನ್ಮಾರ್ಗ ವಾರ್ತೆ

ಬೆಂಗಳೂರು,ಜು.11:ರಾಜ್ಯದಲ್ಲಿ 33,418 ಜನರಿಗೆ ಕೊರೋನಾ ಸೋಂಕು ತಗುಲಿದ್ದು 543 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 13,836 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 19039 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದರೊಂದಿಗೆ, ಅತಿ ಹೆಚ್ಚು ಕೊರೋನ ಪೀಡಿತ ರಾಜ್ಯವಾರು ಪಟ್ಟಿಯಲ್ಲಿ ಕರ್ನಾಟಕವು ಆರನೇ ಸ್ಥಾನಕ್ಕೇರಿದೆ. ಕಳೆದ ಒಂದು ವಾರದಲ್ಲಿ ಸೋಂಕು ಹರಡುವಿಕೆಯ ಬೆಳವಣಿಗೆ ದರ ಏರಿಕೆಯಲ್ಲಿ ಕರ್ನಾಟಕದಲ್ಲಿ ಶೇ.10 ರಷ್ಟಿದ್ದು ದೇಶದಲ್ಲಿ ಅಗ್ರ ಸ್ಥಾನದಲ್ಲಿದೆ.

ರಾಜ್ಯದಲ್ಲಿ ಕೊರೋನ ಸೋಂಕಿನಿಂದ ಗುಣಮುಖರಾಗುವವರ ಪ್ರಮಾಣ ಮಂದಗತಿಯಲ್ಲಿ ದಾಖಲಾಗುತ್ತಿದ್ದು, 33,418 ಸೋಂಕಿತರ ಪೈಕಿ 13,836 ಮಂದಿ ಗುಣಮುಖರಾಗಿರುವ ಮೂಲಕ ರಾಜ್ಯದಲ್ಲಿ ಶೇ.41.4ರಷ್ಟು ಜನರು ಗುಣಮುಖರಾದಂತಾಗಿದೆ.ಇನ್ನೂ ಕೂಡಾ 19,035 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲಿ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿದ್ದು ಅಲ್ಲಿ ಈವರಗೆ ಶೇ.22ರಷ್ಟು ಮಂದಿ ಮಾತ್ರ ಗುಣಮುಖರಾಗಿದ್ದಾರೆ. ಏತನ್ಮಧ್ಯೆ ದೈನಂದಿನ ಗುಣಮುಖದಾದವರ ಸಂಖ್ಯೆಯಲ್ಲಿ ಶುಕ್ರವಾರ ಮೊದಲ ಬಾರಿಗೆ ಸಾವಿರಕ್ಕೂ ಹೆಚ್ಚು ಜನರು ಗುಣಮುಖರಾಗಿದ್ದಾರೆ.

2,38,461 ಪ್ರಕರಣಗಳ ಮೂಲಕ ದೇಶದಲ್ಲಿ ಅಧಿಕ ಕೊರೋನ ಸೋಂಕು ತಗುಲಿದ ರಾಜ್ಯವಾದ ಮಹಾರಾಷ್ಟ್ರದಲ್ಲಿ ಶೇ.3ರಷ್ಟು ಕಳೆದ ಒಂದು ವಾರದಲ್ಲಿ ಸೋಂಕಿನ ಬೆಳವಣಿಗೆ ದರವಿದ್ದರೆ, ತಮಿಳುನಾಡಿನಲ್ಲಿ ಶೇ.4, ದಿಲ್ಲಿಯಲ್ಲಿ ಶೇ.4, ಗುಜರಾತ್‌ ಶೇ.2 ಹಾಗೂ ಉತ್ತರ ಪ್ರದೇಶ ಶೇ.4 ಇದೆ. ಆದರೆ ಕರ್ನಾಟಕದಲ್ಲಿ ಶೇ.10ರಷ್ಟಿದೆ.

ಓದುಗರೇ,ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.