ಕೊರೊನಾ ಇಫೆಕ್ಟ್: ಬರೇ ನಾಲ್ಕು ಮಂದಿಯ ಉಪಸ್ಥಿತಿಯಲ್ಲಿ ಶಬಾನಾ, ಸಬೀಲ್ ವಿವಾಹ

0
1274

ಸನ್ಮಾರ್ಗ ವಾರ್ತೆ

ಕೇರಳ, ಮಾ. 30: ಕೊರೊನ ಲಾಕ್‍ಡೌನ್ ಕಾಲದ ನಿಯಂತ್ರಣಗಳನ್ನು ಪಾಲಿಸಿ ಆಲಪ್ಪುಯ ವಂಡಾಂ ವಾಣಿಯಂಪರಂಬ್ ಎಂಬಲ್ಲಿ ಮಾದರಿ ವಿವಾಹವೊಂದು ಜರಗಿದೆ. ನಾಲ್ವರ ಉಪಸ್ಥಿತಿಯಲ್ಲಿ ಮದುವೆ ನಡೆದಿದ್ದು, ವಾಣಿಯಂ ಪರಂಬ್ ಇಬ್ರಾಹೀಂ ಕುಟ್ಟಿ, ಲೈಲಾಬೀವಿಯ ಮಗಳು ಶಬಾನಳ ವಿವಾಹವು ಕಾಯಂಕುಳಂ ಮುಕ್ಕವಲ ಮೊನಿಭವನದ ಸಲೀಂರಾಜ್ ಮತ್ತು ಬುಶ್ರಾ ದಂಪತಿಗಳ ಪುತ್ರ ಸಬೀಲ್‍ರೊಂದಿಗೆ ನಡೆದಿದೆ. ಸಬೀಲ್‍ನ ಕುಟುಂಬ ವಿದೇಶದಲ್ಲಿತ್ತು. ಮದುವೆ ಸಿದ್ಧತೆಗಾಗಿ ಸ್ವಲ್ಪ ಮೊದಲೇ ಊರಿಗೆ ಬಂದಿದ್ದರು. ಸಬೀಲ್ ಎಪ್ರಿಲ್‍ನಲ್ಲಿ ಪುನಃ ವಿದೇಶಕ್ಕೆ ಹೋಗಬೇಕಿತ್ತು.

ಅದರೆ ಈ ಮದುವೆ ಒಂಬತ್ತು ತಿಂಗಳ ಮೊದಲೇ ನಿಗದಿಯಾಗಿತ್ತು. ಹೀಗಾಗಿ ಮದುವೆ ಮುಂದೂಡುವುದು ಸಾಧ್ಯವಿರಲಿಲ್ಲ. ವರ ಸಬೀಲ್ ರು ಸಹೋದರ ಸಜೀರ್ ನ ಜೊತೆಗೂಡಿ ಕಾಯಂಕುಳ ಮಸೀದಿಯ ಮದುವೆ ನೋಂದಣಿಯೊಂದಿಗೆ ಕಾರಿನಲ್ಲಿ ವಧುವಿನ ತಂದೆಯ ಕುಟುಂಬದ ಮನೆಗೆ ಬಂದರು. ಶಬಾನರ ತಂದೆ ಇಬ್ರಾಹೀಂ ಕುಟ್ಟಿ, ಮೊಹಲ್ಲಾ ಪದಾಧಿಕಾರಿ ಸಹಿತ ಮದುವೆಯಲ್ಲಿ ಒಟ್ಟು ನಾಲ್ವರು ಉಪಸ್ಥಿತರಿದ್ದರು. ಶಬಾನರ ತಾಯಿ ಲೈಲಾ ಕೂಡ ಮದುವೆ ಸ್ಥಳಕ್ಕೆ ಬರಲಿಲ್ಲ.

ಮದುವೆಯ ನಂತರ ವಧುವನ್ನು ಕರೆದುಕೊಂಡು ಸಬೀಲ್ ರ ಕಾಯಂಕುಳಮ್ ಮನೆಗೆ ಹೋಗಲಾಯಿತು. ನಿಕಟ ಬಂಧುಗಳು, ಗೆಳೆಯರು ಸಾಮಾಜಿಕ ಮಾಧ್ಯಮಗಳ ಮೂಲಕ ವಧೂ ವರರಿಗೆ ಶುಭಾಶಯ ಕೋರಿದರು. ಶಬಾನ ಸಿವಿಲ್ ಇಂಜಿನಿಯರ್ ಆಗಿದ್ದು, ಸಬೀಲ್ ದುಬೈಯಲ್ಲಿ ಉದ್ಯೋಗದಲ್ಲಿದ್ದಾರೆ. ಕೊರೊನ ನಿಯಂತ್ರಣ ಮುಗಿದ ಮೇಲೆ ಮದುವೆ ಸತ್ಕಾರ ನೀಡಲಾಗುವುದು ಎಂದು ಇಬ್ರಾಹೀಂ ಕುಟ್ಟಿ ತಿಳಿಸಿದರು.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.