ಕೊರೋನಾ ಭೀತಿಯಿಂದ ಮುಕ್ತವಾದ ಚೀನಾದ ಹುಬೆ: ವಿಮಾನ ಸಂಚಾರ ಪುನರಾರಂಭ

0
794

ಸನ್ಮಾರ್ಗ ವಾರ್ತೆ

ಬೀಜಿಂಗ್, ಮಾ. 30: ಚೀನದಲ್ಲಿ ಕೊರೊನ ಭೀತಿ ಕಡಿಮೆಯಾದ ವರದಿ ಬಂದಿದೆ. ಕೊರೊನದ ಕೇಂದ್ರ ಸ್ಥಳವಾದ ಹುಬೆಯಿಂದ ಚೀನ ಸರಕಾರ ದೇಶದೊಳಗೆ ವಿಮಾನ ಹಾರಾಟ ನಡೆಸಲು ಅನುಮತಿಸಿದೆ ಎಂದು ಚೀನದ ಮಾಧ್ಯಮಗಳು ವರದಿ ಮಾಡಿವೆ. ಆದರೆ ವುಹಾನದಿಂದ ವಿಮಾನ ಸರ್ವಿಸ್ ಆರಂಭವಾಗಿಲ್ಲ. ಹೊಸದಾಗಿ ಕೊರೊನಾ ರೋಗಿಗಳು ಕಡಿಮೆ ಕಂಡು ಬಂದದ್ದರಿಂದ ಸಾವಿನ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದ್ದು ಚೀನ ಹುಬೆಯಿಂದ ವಿಮಾನ ಯಾನ ಮತ್ತೆ ಆರಂಭಿಸಲು ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗ ಚೀನದ ಹಲವು ಪ್ರದೇಶಗಳಲ್ಲಿ ಲಾಕ್‍ಡೌನ್ ಸಡಿಲಿಕೆಯಾಗಿದೆ. ಚೀನದಲ್ಲಿ 3,300 ಮಂದಿ ಕೊರೊನದಿಂದ ಮೃತಪಟ್ಟಿದ್ದಾರೆ. ಇಂದು ಹೊಸ 45 ಪ್ರಕರಣಗಳು ಮಾತ್ರ ಪತ್ತೆಯಾಗಿವೆ.

ಇದೇ ವೇಳೇ ಸ್ಪೈನಿನಲ್ಲಿ, ಅಮೆರಿಕ, ಇಟಲಿಯಲ್ಲಿ ಕೊರೊನ ನಿಯಂತ್ರಣಾತೀತವಾಗಿ ಮುಂದುವರಿಯುತ್ತಿದೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.