ಉಳ್ಳಾಲ: ಕೆಲವು ಮಸೀದಿಗಳಲ್ಲಿ ಸಾಮೂಹಿಕ ನಮಾಝ್ ರದ್ದು- ಇವತ್ತು ಜುಮಾ ಇಲ್ಲ

0
1166

ಸನ್ಮಾರ್ಗ ವಾರ್ತೆ

ಉಳ್ಳಾಲ,ಜೂನ್.26: ಉಳ್ಳಾಲದ ಕೋಟೆಪುರ ಜುಮಾ ಮಸೀದಿ, ಮುಕ್ಕಚ್ಚೇರಿ ಜುಮಾ ಮಸೀದಿ, ಕಲ್ಲಾಪು, ಚೆಂಬುಗುಡ್ಡೆ, ಮದನಿನಗರ, ಆಜಾದ್ ನಗರ, ತೊಕ್ಕೊಟ್ಟು ತಾಜುಲ್ ಉಲಮಾ ಜುಮಾ ಮಸೀದಿ, ಮೇಲಂಗಡಿ ಹೊಸಪಳ್ಳಿ ಜುಮಾ ಮಸೀದಿಗಳಲ್ಲಿ ಸಾಮೂಹಿಕ ನಮಾಝನ್ನು ಅನಿರ್ದಿಷ್ಟಾವಧಿಗೆ ರದ್ದುಗೊಳಿಸಿರುವುದಾಗಿ ಮೂಲಗಳು ತಿಳಿಸಿವೆ.

ಈ ಎಲ್ಲ ಮಸೀದಿಗಳಲ್ಲಿ ನಡೆಸುತ್ತಿದ್ದ ಸಾಮೂಹಿಕ ನಮಾಝನ್ನು ಮತ್ತು ಜುಮಾ ನಮಾಝನ್ನು ಕೊರೋನಾ ಮುಂಜಾಗರೂಕತೆಯ ಕಾರಣಕ್ಕಾಗಿ ರದ್ದುಗೊಳಿಸಿರುವುದಾಗಿ ತಿಳಿದು ಬಂದಿದೆ.

ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಈ ಮಸೀದಿಗಳಲ್ಲಿ ಹೇಗೆ ನಮಾಜ್ ನಿರ್ವಹಿಸಲಾಗುತ್ತಿತ್ತೋ ಅದೇ ರೀತಿಯಲ್ಲಿ ಈ ಮಸೀದಿಗಳಲ್ಲಿ ನಮಾಝ್ ಮುಂದುವರಿಯಲಿದ್ದು ಸಾರ್ವಜನಿಕರು ಮನೆಯಲ್ಲಿದ್ದುಕೊಂಡು ನಮಾಝ್ ನಿರ್ವಹಿಸುವಂತೆ ವಿನಂತಿಸಲಾಗಿದೆ.

ಉಳ್ಳಾಲದಲ್ಲಿ ಕೊರೋನಾದಿಂದಾಗಿ ಓರ್ವ ಮಹಿಳೆ ಮೃತಪಟ್ಟು ಪೊಲೀಸ್ ಠಾಣೆ ಸೀಲ್ ಡೌನ್ ಆಗಿರುವ ಈ ಸಂದರ್ಭದಲ್ಲಿ ಮುಂಜಾಗರೂಕತಾ ಕ್ರಮವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದೂ ತಿಳಿಸಲಾಗಿದೆ.

ಸರಕಾರವು ಮಸೀದಿ ತೆರೆಯಲು ಅನುಮತಿ ನೀಡಿದ ಬಳಿಕ ಈ ಮಸೀದಿಗಳಲ್ಲಿ ಐದು ಹೊತ್ತಿನ ಸಾಮೂಹಿಕ ನಮಾಝ್ ಮತ್ತು ಜುಮಾ ನಮಾಝನ್ನು ಪ್ರಾರಂಭಿಸಲಾಗಿತ್ತು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.