ದೇಶದಲ್ಲಿ ಒಂದೇ ದಿನದಲ್ಲಿ 1.93ಲಕ್ಷ ಜನರಿಗೆ ಕೊರೋನ ದೃಢ; 442 ಮಂದಿ ಮೃತ

0
221

ಸನ್ಮಾರ್ಗ ವಾರ್ತೆ

ನವದೆಹಲಿ: ದೇಶದಲ್ಲಿ 24 ಗಂಟೆಗಳಲ್ಲಿ 1.93ಲಕ್ಷ ಹೊಸ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದೆ. 60,182 ಜನರು ಗುಣಮುಖರಾಗಿದ್ದು, 442 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ 1,33,318 ಹೆಚ್ಚಳ ದಾಖಲಾಗಿದೆ. ಪ್ರಸ್ತುತ 9.48 ಲಕ್ಷ ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳಲ್ಲಿ 1.32 ಲಕ್ಷ ಹೆಚ್ಚಳವಾಗಿದೆ. ಮೂರನೇ ತರಂಗದಲ್ಲಿ, ಮೊದಲ ಬಾರಿಗೆ ಸಕ್ರಿಯ ಪ್ರಕರಣಗಳು 9 ಲಕ್ಷವನ್ನು ದಾಟಿವೆ. ಅದೇ ಸಮಯದಲ್ಲಿ, ಹೊಸದಾಗಿ ಸೋಂಕಿತರಲ್ಲಿ 25 ಸಾವಿರ ಹೆಚ್ಚಳ ಕಂಡುಬಂದಿದೆ. ಸೋಮವಾರದಂದು 1.69 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದರು.

ಈಗ ದೇಶದಲ್ಲಿ ಒಟ್ಟು 3.60 ಕೋಟಿ ಜನರು ಸೋಂಕಿನ ಹಿಡಿತಕ್ಕೆ ಒಳಗಾಗಿದ್ದಾರೆ. ಅದರಲ್ಲಿ 3.46 ಕೋಟಿ ಜನರು ಚೇತರಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 4,84,655 ಜನರು ಸಾವನ್ನಪ್ಪಿದ್ದಾರೆ.