ಬಿಜೆಪಿಗೆ ರಾಜೀನಾಮೆ ನೀಡಿದ ಶಾಸಕ ವಿನಯ್ ಶಕ್ಯ ನಾಪತ್ತೆ!

0
182

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಉತ್ತರಪ್ರದೇಶ ಸರಕಾರದ ಸಚಿವ ಸ್ವಾಮಿ ಪ್ರಸಾದ್ ಮೌರ್ಯರೊಂದಿಗೆ ಬಿಜೆಪಿಗೆ ರಾಜೀನಾಮೆ ನೀಡಿದ ಶಾಸಕ ವಿನಯ್ ಶಕ್ಯ ನಾಪತ್ತೆಯಾಗಿದ್ದು ಮಾವ ಮತ್ತು ಅಜ್ಜಿ ಸೇರಿ ತಂದೆಯನ್ನು ಹೌರದಿಂದ ಲಕ್ನೊದ ಅಜ್ಞಾತ ಸ್ಥಳದಲ್ಲಿರಿಸಿದ್ದಾರೆ ಎಂದು ಶಕ್ಯರ ಪುತ್ರಿ ರಿಯಾ ಶಕ್ಯ ವೀಡಿಯೊ ಸಂದೇಶದಲ್ಲಿ ದೂರಿದ್ದಾರೆ. ರಿಯರ ವೀಡಿಯೊ ಭಾರೀ ವೇಗದಲ್ಲಿ ಪ್ರಚಾರವಾಗಿದೆ. ಶಕ್ಯ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಬಹಿರಂಗವಾಗುವುದರೊಂದಿಗೆ ಮಾವ ದೇವೇಶ್ ಶಕ್ಯ ತ್ತು ಅಜ್ಜಿ ಸೇರಿ ಅವರನ್ನು ಎಲ್ಲಿಗೋ ಕರೆದುಕೊಂಡು ಹೋಗಿದ್ದಾರೆ. ನಮಗೆ ಈಗ ತಂದೆ ಎಲ್ಲಿದ್ದಾರೆಂದು ಗೊತ್ತಿಲ್ಲ. ಅವರ ಪತ್ತೆಗೆ ಉತ್ತರಪ್ರದೇಶ ಸರಕಾರ ಸಹಾಯ ಮಾಡಬೇಕೆಂದು ರಿಯ ಹೇಳಿದರು. ಆದರೆ, ಶಾಸಕರು ತಮ್ಮ ಮನೆಯಲ್ಲಿ ಸುರಕ್ಷಿತವಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.