3ನೇ ತರಂಗ ಮುನ್ನೆಚ್ಚರಿಕೆಗೆ ಜಾಗೃತವಾದ ಕೇರಳ: 33 ಆಕ್ಸಿಜನ್ ಜನರೇಶನ್ ಯುನಿಟ್‍ಗಳ ಸ್ಥಾಪನೆಗೆ ಯೋಜನೆ

0
557

ಸನ್ಮಾರ್ಗ ವಾರ್ತೆ

ತಿರುವನಂತಪುರಂ: ಮೂರನೇ ತರಂಗದ ಕುರಿತು ತಜ್ಞರ ಅಭಿಪ್ರಾಯವನ್ನು ಪರಿಗಣಿಸಿ ಎಲ್ಲರೂ ಅತ್ಯಂತ ಎಚ್ಚರಿಕೆ ವಹಿಸಬೇಕೆಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಎರಡನೇ ಅಲೆಯಿಂದ ದೇಶ ಸಂಪೂರ್ಣ ಚೇತರಿಸಿಲ್ಲ. ಮಾತ್ರವಲ್ಲ ಅತೀ ತೀವ್ರಗತಿಯಲ್ಲಿ ಹರಡುವ ಡೆಲ್ಟಾ ವೈರಸ್ ಕೂಡ ಇದೆ. ಎಲ್ಲರಿಗೂ ಲಸಿಕೆ ನೀಡುವ ಮೊದಲು ಮೂರನೇ ಅಲೆ ಬಂದರೆ ಗಂಭೀರ ಪರಿಸ್ಥಿತಿ ಸೃಷ್ಟಿಯಾಗಲಿದೆ. ಮೂರನೇ ಅಲೆಯ ಕಾರಣದಿಂದ ಆಕ್ಸಿಜನ್ ಲಭ್ಯತೆ ಮತ್ತು ಚಿಕಿತ್ಸೆಯ ಸೌಲಭ್ಯವನ್ನು ದೃಢಪಡಿಸಿಕೊಳ್ಳಲು ಸಚಿವರ ನೇತೃತ್ವದಲ್ಲಿ ವಿಶೇಷ ಅವಲೋಕನ ಸಭೆ ನಡೆಸಲಾಗಿದ್ದು, ಆಕ್ಸಿಜನ್ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಕೇಂದ್ರದ ಯೋಜನೆಗಳು, ರಾಜ್ಯದ ಯೋಜನೆಗಳು, ಸಿಎಸ್‍ಆರ್. ಫಂಡ್, ಸ್ವಯಂಸಂಘಟನೆಗಳ ಫಂಡ್ ಉಪಯೋಗಿಸಿ ರಾಜ್ಯದಲ್ಲಿ ಆಕ್ಸಿನಜನ್ ಜನರೇಷನ್ ಯುನಿಟ್‍ಗಳನ್ನು ಸಜ್ಜುಗೊಳಿಸಲಾಗುತ್ತಿದೆ.
ರಾಜ್ಯದಲ್ಲಿ ವಿವಿಧ ಕಡೆಗಳಲ್ಲಿ 33 ಆಕ್ಸಿಜನ್ ಯುನಿಟ್‍ಗಳನ್ನು ಆಗಸ್ಟ್‌ನಲ್ಲಿ ಕಾರ್ಯ ಸಮರ್ಥಗೊಳಿಸಲು ಸಚಿವೆ ವೈದ್ಯಕೀಯ ಸೇವಾ ಕಾರ್ಪೊರೇಷನ್‍ಗೆ ಸೂಚನೆ ನೀಡಿದ್ದಾರೆ. 77 ಮೆಟ್ರಿಕ್ ಟನ್ ಆಕ್ಸಿಜನ್ ಹೆಚ್ಚು ಉತ್ಪಾದಿಸಲು ಇದರಿಂದ ಸಾಧ್ಯವಾಗಲಿದೆ.

ಸರಕಾರದ ವಿವಿಧ ನಿಧಿ ಬಳಸಿ ಯುನಿಟ್‍ಗಳ ನಿರ್ಮಾಣ ಪ್ರಗತಿಯಲ್ಲಿದ್ದು ಅದನ್ನು ಸಭೆಯಲ್ಲಿ ಅವಲೋಕನ ನಡೆಸಲಾಗಿದೆ. ಕೊರೊನ ಎರಡನೆ ಪ್ಯಾಕೇಜಿನಲ್ಲಿ ಸೇರಿಸಿ ರಾಜ್ಯದ ಶಿಶುರೋಗ ಚಿಕಿತ್ಸಾ ಕ್ಷೇತ್ರದಲ್ಲಿತುರ್ತು ವ್ಯವಸ್ಥೆ ಮಾಡಲು ಕೆಎಂಎಸ್‍ಸಿಎಲ್, ಆರೋಗ್ಯ ಇಲಾಖೆ. ಆರೋಗ್ಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಚಿವರುಸೂಚನೆ ನೀಡಿದರು. ವ್ಯಾಕ್ಸಿನ್ ದೊರಕಿಸುವ ಜೊತೆಗೆ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಪಾಲಿಸಬೇಕೆಂದು ಹೇಳಿದ ಸಚಿವರು ವ್ಯಾಕ್ಸಿನ್ ತೆಗೆದುಕೊಂಡವರೂ ಮುನ್ನೆಚ್ಚರಿಕೆ ವಹಿಸಬೇಕೆಂದು ಹೇಳಿದ್ದಾರೆ.