ಭಾರತದಲ್ಲಿ ಕೊರೋನ ಎರಡನೆ ಅಲೆ: ಎಪ್ರಿಲ್ ಎರಡನೇಯ ವಾರದಲ್ಲಿ ಅತ್ಯಂತ ತೀವ್ರವಾಗಲಿದೆ- ಎಸ್‍ಬಿಐ ವರದಿ

0
386

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶದಲ್ಲಿ ಇತ್ತೀಚೆಗೆ ಕೊರೋನ ವೈರಸ್‌ನ ಹರಡುವಿಕೆಯು ತೀವ್ರಗೊಂಡಿದ್ದು ಎಪ್ರಿಲ್ ಎರಡನೇ ವಾರದಲ್ಲಿ ಇದು ತೀವ್ರವಾಗಲಿದೆ ಎಂಬುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವರದಿ ಮಾಡಿದೆ. ಇನ್ನೂ ಎರಡು ತಿಂಗಳವರೆಗೆ ಇದು ಮುಂದುವರಿಯಲಿದ್ದು 25 ಲಕ್ಷ ಮಂದಿಗೆ ಎರಡನೇ ತರಂಗ ತಗಲುವುದು. ಫೆಬ್ರುವರಿ 15ರಿಂದ ದೇಶದಲ್ಲಿ ಎರಡನೆಯ ಅಲೆ ಕಂಡು ಬಂದಿದೆ. 100 ದಿನಗಳವರೆಗೆ ಇದು ಇರಲಿದೆ. ಆದರೆ, ಲಾಕ್‌ಡೌನ್ ಸಂಚಾರ ನಿಯಂತ್ರಣಗಳಿಂದ ಪ್ರಯೋಜನವಾಗದು. ಬದಲಾಗಿ ವ್ಯಾಕ್ಸಿನ್ ಶೀಘ್ರವಾಗಿ ಎಲ್ಲರಿಗೂ ತಲುಪಿಸಬೇಕೆಂದು ವರದಿ ಆಗ್ರಹಿಸಿದೆ.

ಸರಾಸರಿ ಪ್ರತಿದಿನ 34 ಲಕ್ಷ ಮಂದಿ ವ್ಯಾಕ್ಸಿನ್ ಸ್ವೀಕರಿಸುತ್ತಿದ್ದಾರೆ. ಇದು 40-45 ಲಕ್ಷಕ್ಕೇರಿಸಬೇಕು. 45 ವರ್ಷದ ಮೇಲ್ಪಟ್ಟವರಿಗೆ ನಾಲ್ಕು ತಿಂಗಳೊಳಗೆ ವ್ಯಾಕ್ಸಿನ್ ನೀಡುವ ಕಾರ್ಯ ಮುಗಿದಿರಬೇಕು ಎಂದು ವರದಿಯು ಉಲ್ಲೇಖಿಸಿದೆ.