ಪ್ರತಿರೋಧದಲ್ಲಿ ನಿರ್ಲಕ್ಷ್ಯ ಸಂಭವಿಸಿದರೆ ಕೊರೋನ ಮರುಕಳಿಸಬಹುದು- ಸೌದಿ ಆರೋಗ್ಯ ಸಚಿವ

0
504

ಸನ್ಮಾರ್ಗ ವಾರ್ತೆ

ಜಿದ್ದ,ಅ.20: ಕೊರೋನ ಪ್ರತಿರೋಧದಲ್ಲಿ ನಿರ್ಲಕ್ಷ್ಯ ಸಂಭವಿಸಿದರೆ ಅದು ಮರುಕಳಿಸಬಹುದು ಎಂದು ಸೌದಿ ಅರೇಬಿಯದ ಆರೋಗ್ಯ ಸಚಿವ ಡಾ.ತೌಫೀಖ್ ಅಲ್‍ ರಬೀಅ ಮುನ್ನೆಚ್ಚರಿಕೆ ನೀಡಿದ್ದಾರೆ. ರೋಗವನ್ನು ಪ್ರತಿರೋಧಿಸಲು ಅಗತ್ಯವಾದ ಆರೋಗ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಇದರಲ್ಲಿ ನಿರ್ಲಕ್ಷ್ಯ ಸಂಭವಿಸಿದರೆ ಕೊರೋನ ಹರಡುವುದು ಹೆಚ್ಚಳವಾಗಬಹುದೆಂದು ಅವರು ಹೇಳಿದರು.

ಅಲ್ ಅಖ್‍ಬಾರಿಯ ಚ್ಯಾನೆಲ್‍ಗೆ ಕೊರೋನ ಸ್ಥಿತಿಯನ್ನು ವಿವರಿಸಿದ ಸಚಿವರು ಆರೋಗ್ಯ ಮುನ್ನೆಚ್ಚರಿಕೆಯಲ್ಲಿ ನಾವು ಬದ್ಧತೆ ತೋರಿಸಿದ ಪರಿಣಾಮವಾಗಿ ಈಗ ಕೊರೋನ ನಿಯಂತ್ರಣದಲ್ಲಿದೆ. ವ್ಯಾಕ್ಸಿನ್ ಪೂರ್ಣ ಸುರಕ್ಷಿತ ಹಾಗೂ ಫಲಪ್ರದವಾಗುವಾಗ ಅದನ್ನು ತರಿಸಿಕೊಳ್ಳಲು ಸರಕಾರ ಬಯಸಿದೆ. ಯಾರಿಗಾದರೂ ಕೊರೋನ ಲಕ್ಷಣ ಕಂಡು ಬಂದರೆ ಹತ್ತಿರದ ಕ್ಲಿನಿಕ್‍ಗಳಲ್ಲಿ ಚಿಕಿತ್ಸೆ ಪಡೆದು ಕೊಳ್ಳಬಹುದು.

ನಾವೆಲ್ಲ ಒಂದೇ ದೋಣಿಯಲ್ಲಿ ಹೋಗುತ್ತಿದ್ದೇವೆ. ಕೆಲವರ ನಿರ್ಲಕ್ಷ್ಯದಿಂದ ಎಲ್ಲರಿಗೂ ಹಾನಿಯಾಗಬಹುದು. ಲೋಕದ ಹಲವು ದೇಶಗಳಲ್ಲಿ ಕೊರೋನ ಎರಡನೇ ಬಲಶಾಲಿಯಾದ ತರಂಗಕ್ಕೆ ಸಾಕ್ಷಿಯಾಗುತ್ತಿದೆ. ಸಾಮಾಜಿಕ ಅಂತರ ಪಾಲಿಸುವುದರಲ್ಲಿ, ಮಾಸ್ಕ್ ಧರಿಸುವದರಲ್ಲಿ ಆಗಿರುವ ನಿರ್ಲಕ್ಷ್ಯವಿದು. ಕೊರೋನ ಪ್ರಕರಣದ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಐಸಿಯು ಪ್ರಕರಣಗಳಲ್ಲಿಯೂ ಕಡಿಮೆಯಾಗಿದೆ. ಜನರ ಆರೋಗ್ಯಕ್ಕೆ ಸರಕಾರ ಉತ್ಕೃಷ್ಟ ಪರಿಗಣನೆ ಕೊಡುತ್ತಿದೆ ಎಂದು ಅವರು ಹೇಳಿದರು.